ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: 75 ಸಸಿ ನೆಟ್ಟ ರೋಟರಿ ಕ್ಲಬ್ ಸದಸ್ಯರು

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸೈಕಲ್ ರೇಸ್, ಪರಿಸರ ಜಾಗೃತಿ
Last Updated 23 ಜೂನ್ 2022, 12:53 IST
ಅಕ್ಷರ ಗಾತ್ರ

ಬೀದರ್: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಬೀದರ್ ಪದಾಧಿಕಾರಿಗಳು ಹಾಗೂ ಸದಸ್ಯರು ಇಲ್ಲಿಯ ಮಾಮನಕೇರಿಯ ಜ್ಞಾನಸುಧಾ ವಿದ್ಯಾಲಯ ಆವರಣದಲ್ಲಿ 75 ಸಸಿಗಳನ್ನು ನೆಟ್ಟರು.

ವಿವಿಧ ಬಗೆಯ ಸಸಿಗಳನ್ನು ನೆಟ್ಟು, ಪರಿಸರ ಸಂರಕ್ಷಣೆಯಲ್ಲಿ ಸಸಿಗಳ ಪಾತ್ರವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಇದಕ್ಕೂ ಮುನ್ನ ಪರಿಸರ ಜಾಗೃತಿ ಭಾಗವಾಗಿ ರಿಂಗ್ ರಸ್ತೆಯಿಂದ ಬೆನಕನಳ್ಳಿ ಹಾಗೂ ಬೆನಕನಳ್ಳಿಯಿಂದ ರಿಂಗ್ ರಸ್ತೆ ವರೆಗೆ ವಿದ್ಯಾರ್ಥಿಗಳ 8 ಕಿ.ಮೀ. ಉದ್ದದ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.

ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಶ್ರೀ ಸಾಯಿ ಆದರ್ಶ ಪ್ರೌಢಶಾಲೆಯ ಕುಪೇಂದ್ರ ರಾಠೋಡ್ ಅವರಿಗೆ ದಿಲೀಪ್ ಸೈಕಲ್ ಸ್ಟೋರ್ ಮಾಲೀಕ ನರೇಂದ್ರ ಸಾಂಗವಿ ಅವರು ಬಹುಮಾನ ರೂಪದಲ್ಲಿ ಸೈಕಲ್ ನೀಡಿದರು. ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಶ್ರೀ ದತ್ತಗಿರಿ ಮಹಾರಾಜ ಪ್ರೌಢಶಾಲೆಯ ಕಿರಣ ಸಂಗಮೇಶ ಮತ್ತು ಶ್ರೀ ಸಾಯಿ ಆದರ್ಶ ಪ್ರೌಢಶಾಲೆಯ ಶಿವರಾಜ ಲಮಾಣಿ ಅವರಿಗೆ ರೋಟರಿ ಕ್ಲಬ್ ಬೀದರ್ ವತಿಯಿಂದ ₹ 3,000 ಹಾಗೂ ₹ 2,000 ಬಹುಮಾನ ವಿತರಿಸಲಾಯಿತು.

ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಪ್ರಕಾಶ ಟೊಣ್ಣೆ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಹಾಗೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಮುಖಂಡ ಗುರುನಾಥ ಕೊಳ್ಳೂರು, ಶಂಕರರಾವ್ ಕೊಟರಕಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ, ನಿರ್ದೇಶಕ ಮುನೇಶ್ವರ ಲಾಖಾ, ಕರ್ನಲ್ ಶರಣಪ್ಪ ಸಿಕೇನಪುರ, ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ಶಿವಶಂಕರ ಕಾಮಶೆಟ್ಟಿ, ಡಾ. ನಿತೇಶಕುಮಾರ ಬಿರಾದಾರ ಮೊದಲಾದವರು ಇದ್ದರು.

ಸೈಕಲ್ ರೇಸ್ ಸ್ಪರ್ಧೆಯಲ್ಲಿ 12 ಶಾಲೆಗಳ 150 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT