ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಭಾಷೆಯಲ್ಲಿ ಭಾವೈಕ್ಯತೆ: ಡಾ.ಅಂಬಲಗಿ

Last Updated 21 ಮಾರ್ಚ್ 2022, 4:46 IST
ಅಕ್ಷರ ಗಾತ್ರ

ಬೀದರ್: ‘ಬಹು ಭಾಷೆಗಳ ಸಮ್ಮಿಲನದಿಂದ ಭಾವನೆಗಳು ಹತ್ತಿರವಾಗಿ ಭಾವೈಕ್ಯತೆ ಮೂಡುತ್ತದೆ’ ಎಂದು ಸಾಹಿತಿ ಡಾ. ಕಾಶಿನಾಥ ಅಂಬಲಗಿ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಭಾನುವಾರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವುರ ಹಾಗೂ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಬಹು ಭಾಷೆ ಸಮಾಜದ ವೈಶಿಷ್ಟ್ಯ. ಇಲ್ಲಿ ಹಲವು ಭಾಷೆ, ಸಂಸ್ಕೃತಿ, ವಿಭಿನ್ನ ಜೀವನ ಶೈಲಿ, ಅನೇಕ ಧರ್ಮಗಳು ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕುವ ಮೂಲಕ ಜಗತ್ತಿಗೆ ಭಾವೈಕ್ಯತೆ ಸಂದೇಶ ಸಾರಲಾಗಿದೆ’ ಎಂದರು.

ಪ್ರೊ. ದೇವೇಂದ್ರ ಕಮಲ್ ಮಾತನಾಡಿದರು.

ಒಡಿಸಾದ ರವಿಂದ್ರನಾಥ ಪಂಡಿತ, ಭಾರತಿ ಲಕ್ಷ್ಮೀಪಾಲ, ತಮಿಳುನಾಡಿನ ಡಾ.ಬಾಬು ಎನ್, ಡಾ.ರಾಜಶೇಖರನ್.ಎಲ್, ಕೇರಳದ ಪ್ರೊ.ಎಮ್.ಎ ಮಹಮ್ಮದ್ ಅಸ್ಲಮ್, ಬಿಹಾರದ ಡಾ.ಇನಾಮುಲ್ ಆಜಾದ್, ಕರ್ನಾಟಕದ ಡಾ.ಶೀತಲ್ ಪ್ರಶಾಂತ, ಪ್ರೊ.ಬಸವರಾಜ ಡೋಣೂರು, ಡಾ.ಮಂಜುನಾಥ, ಎಮ್.ಜಿ ಗಂಗನಪಳ್ಳಿ, ಪ್ರೊ.ವೀರಶೆಟ್ಟಿ ಮೈಲೂರಕರ್, ಡಾ.ಶಿರಾಜೋದ್ದಿನ್, ಸಂಜುಕುಮಾರ ಜುಮ್ಮಾ, ತೆಲಂಗಾಣದ ವೈ. ರಾಘವೇಂದ್ರರಾವ್, ಆಂಧ್ರದ ಡಾ. ವೆಂಕಟಕೃಷ್ಣ ಅವರು ಕವನ ವಾಚನ ಮಾಡಿದರು.

ಉಷಾ ಪ್ರಭಾಕರ ನೇತೃತ್ವದ ನೂಪೂರ ನೃತ್ಯ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT