ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಉದ್ಯಾನ ಉದ್ಘಾಟನೆ

15 ಉದ್ಯಾನಗಳಿಗೆ ಮಹಾ ಪುರುಷರ ಹೆಸರು: ನಿರ್ಧಾರ
Last Updated 7 ಅಕ್ಟೋಬರ್ 2021, 15:06 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಗುರುದ್ವಾರ ಬಳಿಯ ತೇಲಿ ಲೇಔಟ್‍ನಲ್ಲಿ ಬೀದರ್ ನಗರಾಭಿವೃದ್ಧಿ ಪಾಧಿಕಾರದ ವತಿಯಿಂದ ನಿರ್ಮಿಸಲಾದ ನರೇಂದ್ರ ಮೋದಿ(ನಮೋ) ಉದ್ಯಾನ ಗುರುವಾರ ಉದ್ಘಾಟನೆಗೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಬಾಬುವಾಲಿ ಉದ್ಯಾನವನ್ನು ಉದ್ಘಾಟಿಸಿದರು.

ಅಭಿಯಾನದ ಅಂಗವಾಗಿ ಉದ್ಯಾನಕ್ಕೆ ನರೇಂದ್ರ ಮೋದಿ ಉದ್ಯಾನ ಎಂದು ಹೆಸರಿಡಲಾಗಿದೆ. ಪ್ರಧಾನಿ ಅವರ 71ನೇ ಜನ್ಮದಿನದ ನಿಮಿತ್ತ 71 ಸಸಿಗಳನ್ನೂ ನೆಡಲಾಗಿದೆ. ಉದ್ಯಾನವನ್ನು ಮಾದರಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ನಗರದಲ್ಲಿ 15 ಉದ್ಯಾನಗಳಿಗೆ ಮಹಾ ಪುರುಷರ ಹೆಸರು ಇಡಲು ನಿರ್ಧರಿಸಲಾಗಿದೆ. ಬಡಾವಣೆಯೊಂದಕ್ಕೆ ಬಿಎಸ್‍ವೈ ಬಡಾವಣೆ ಎಂದು ಹೆಸರಿಡಲಾಗಿದೆ. ಗಣೇಶ ವಿಸರ್ಜನೆ ಹೊಂಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರಿಗೆ ಅನುದಾನ ಕೋರಲಾಗಿದೆ ಎಂದು ಹೇಳಿದರು.

ನಗರದಲ್ಲಿನ ಕೆರೆಗಳ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು. ಪಾಪನಾಶ ಕೆರೆ ಅಭಿವೃದ್ಧಿಗೆ ಈಗಾಗಲೇ ರೂ. 2 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ್ ಭೂಸಾರೆ, ಬಿಜೆಪಿ ಮುಖಂಡರಾದ ಗುರುನಾಥ ಜ್ಯಾಂತಿಕರ್, ಲುಂಬಿಣಿ ಗೌತಮ, ಮಹೇಶ್ವರ ಸ್ವಾಮಿ, ನಿತಿನ್ ಕರ್ಪೂರ್, ಹಣಮಂತ ಬುಳ್ಳಾ, ಚಂದ್ರಕಲಾ ವಿಶ್ವಕರ್ಮ, ಮಹಾನಂದ ಪಾಟೀಲ, ಹೇಮಲತಾ ಜೋಶಿ, ಲಕ್ಷ್ಮಿ, ಚಂದ್ರಶೇಖರ ಪಾಟೀಲ, ಸಚ್ಚಿದಾನಂದ ಚಿದ್ರಿ, ರಾಜು ಬಿರಾದಾರ, ನರೇಶ ಗೌಳಿ, ಶಶಿಧರ ಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT