ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪನ್‌ ಜಿಮ್‌ ಕಾಮಗಾರಿಗೆ ಭೂಮಿಪೂಜೆ

Published 25 ಜನವರಿ 2024, 5:37 IST
Last Updated 25 ಜನವರಿ 2024, 5:37 IST
ಅಕ್ಷರ ಗಾತ್ರ

ಬೀದರ್‌: ಕೇಂದ್ರ ಸಚಿವ ಭಗವಂತ ಖೂಬಾ ಅವರು ಜಿಲ್ಲೆಯ ವಿವಿಧೆಡೆ ಒಪನ್‌ ಜಿಮ್‌ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಇಲ್ಲಿನ ಶಿವನಗರ ಉತ್ತರದ ಹನುಮಾನ ಮಂದಿರ, ಗಣೇಶ ಮೈದಾನ, ಬಸವಕಲ್ಯಾಣ ನಗರ ಹಾಗೂ ಆಳಂದ ತಾಲ್ಲೂಕಿನ ಜಿಡಗಾದಲ್ಲಿ ಕಾಮಗಾರಿಗೆ ಚಾಲನೆ ನೀಡಿದರು.

‘ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವುದು ಉತ್ತಮ. ಪ್ರತಿಯೊಬ್ಬರು ದಿನನಿತ್ಯ ವ್ಯಾಯಾಮ ಮಾಡುವುದು ರೂಢಿಸಿಕೊಳ್ಳಬೇಕು. ಬೀದರ್‌ ನಗರ ಹಾಗೂ ಕ್ಷೇತ್ರದ ಇತರೆಡೆ ಒಟ್ಟು 20 ಕಡೆಗಳಲ್ಲಿ ಈಗಾಗಲೇ ಒಪನ್ ಜಿಮ್ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕು ಕಡೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮಿಜಿ, ನಗರಸಭೆ ಸದಸ್ಯ ಚಂದ್ರಶೇಖರ ಪಾಟೀಲ, ಮುಖಂಡರಾದ ಎಂ.ಜಿ. ಮುಳೆ, ರಾಜು ಚಿಂತಾಮಣಿ, ಅಶೋಕ ವಕಾರೆ, ಆನಂದರಾವ ಪಾಟೀಲ, ಸೋಮು ಪಾಟೀಲ ಗಾದಗಿ, ವೀರಣ್ಣಾ ಹಲಗೆ, ರಜಿನೀಶ ವಾಲಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT