ಬುಧವಾರ, ಏಪ್ರಿಲ್ 21, 2021
23 °C

ಲಾತೂರ್‌ನಲ್ಲಿ ಜನತಾ ಕರ್ಫ್ಯೂ ಜಾರಿ, ಜಿಲ್ಲೆಗೆ ಕಡಿಮೆ ಸಂಖ್ಯೆಯಲ್ಲಿ ಬಂದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಲಾತೂರ್‌ ಜಿಲ್ಲೆಯಲ್ಲಿ ಶನಿವಾರ ಜನತಾ ಕರ್ಫ್ಯೂ ಘೋಷಣೆ ಮಾಡಿದ ಕಾರಣ ಅಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ದೂರದ ಊರುಗಳ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿದ್ದರೂ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿದವು. ಮಹಾರಾಷ್ಟ್ರದ ಬಸ್‌ಗಳು ಶನಿವಾರ ಜಿಲ್ಲೆಗೆ ಬರಲಿಲ್ಲ.

ಔರಾದ್‌ ಸಾರಿಗೆ ಘಟಕದ ಒಂದು ಬಸ್‌ ಲಾತೂರ್‌ಗೆ ಹೋಗಿ ಬಂದಿದೆ. ಬೆರಳೆಣಿಕೆಯಲ್ಲಿ ಮಾತ್ರ ಪ್ರಯಾಣಿಕರು ಇದ್ದರು. ಬಸವಕಲ್ಯಾಣ ಹಾಗೂ ಕಮಲನಗರದಿಂದ ಬಸ್‌ಗಳು ಲಾತೂರ್‌ ನಗರಕ್ಕೆ ಹೋಗಿಲ್ಲ.

ಮಹಾರಾಷ್ಟ್ರದಿಂದ‌ ಬಂದ 50 ಪ್ರಯಾಣಿಕರನ್ನು‌ ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡಲಾಯಿತು. ತೀವ್ರ ‌ಜ್ವರ ಕಾಣಿಸಿಕೊಂಡ 6 ಜನರ ಕೋವಿಡ್ ಪರೀಕ್ಷೆ ಮಾಡಲಾಗಿದೆ. ವೈದ್ಯಕೀಯ ವರದಿ ಇಲ್ಲದವರನ್ನು ಮರಳಿ ಕಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ.ಅನೀಲ ಗಡ್ಡೆ ತಿಳಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಚೆಕ್‌ಪೋಸ್ಟ್‌ ನಲ್ಲಿ ಗುರುವಾರ ರಾತ್ರಿ 9 ಗಂಟೆ ವರೆಗೆ 1206 ಜನರು ಜಿಲ್ಲೆಯೊಳಗೆ ಬಂದಿದ್ದಾರೆ. 66 ಜನರನ್ನು ವಾಪಸ್‌ ಕಳಿಸಲಾಗಿದೆ. ಶುಕ್ರವಾರ ನೂರಕ್ಕಿಂತ ಕಡಿಮೆ ಜನ ಬಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.