ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನಗಳಿಂದ ನಕರಾತ್ಮಕ ಚಿಂತನೆ’

Last Updated 8 ಮೇ 2022, 12:11 IST
ಅಕ್ಷರ ಗಾತ್ರ

ಗೋರ್ಟಾ(ಬಿ) (ಹುಲಸೂರ): ‘ವಚನಗಳು ಜನರನ್ನು ನಕರಾತ್ಮಕ ಚಿಂತನೆಗಳಿಂದ ದೂರವಿರಿಸುತ್ತವೆ’ ಎಂದು ಪ್ರವಚನಕಾರ ಪ್ರಭುದೇವರು ಹೇಳಿದರು.

ಬಸವ ಜಯಂತಿ ಅಂಗವಾಗಿ ಗ್ರಾಮದ ಲಿಂಗಾಯತ ಮಹಾ ಮಠದಲ್ಲಿ ಆರಂಭವಾದ ‘ವಚನ ಜೀವನ’ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರ ವಚನಗಳನ್ನು ಆಲಿಸಿದಾಗ ವ್ಯಕ್ತಿ ಮೂಲ ಗುಣಗಳನ್ನು ಕಳೆದುಕೊಂಡು ಶರಣನಾಗುತ್ತಾನೆ. ಆನಂದದ ಹೊನಲು ಹರಿದಾಗ, ದೈವಿಕಾರುಣ್ಯ ಉಮ್ಮಳಿಸಿದಾಗ ಹೊರಬಂದ ಶಬ್ದವೇ ವಚನ. ಈ ವಚನಗಳು ನಮ್ಮ ನೆಮ್ಮದಿಯ ಬದುಕಿನ ಸೂತ್ರಗಳು ಎಂದು ಅವರು ತಿಳಿಸಿದರು.

ಶರಣರ ವಚನಗಳು ಕೇಳಿಯೂ ಅಲ್ಲಿ ಇಲ್ಲಿ ಗುಡಿ ಗುಂಡಾರ ಸುತ್ತುವವರಿಗೆ ಬೇರೆ ಬಾವಿಯ ತೋಡಿ ಉಪ್ಪು ನೀರನುಂಬುವಂತೆ ಎನ್ನುತ್ತಾರೆ ಗುರು ಬಸವಣ್ಣ. ಶರಣರ ವಚನಗಳಿಗೆ ಕೆಲವರು ಶಾಸ್ತ್ರ ಎಂದರೆ ಇನ್ನೂ ಕೆಲವರು ಸಾಹಿತ್ಯ ಎನ್ನುತ್ತಾರೆ. ಆದರೆ ವಚನಗಳು ಸಾಹಿತ್ಯಕ್ಕೆ ಸಾಹಿತ್ಯವಾಗಿ, ಶಾಸ್ತ್ರಕ್ಕೆ ಶಾಸ್ತ್ರವಾಗಿ ತನ್ನದೆ ಅರ್ಥ ವಿಸ್ತಾರತೆ ಪಡೆಯುತ್ತಿದೆ ಎಂಬುವುದಷ್ಟೇ ಸತ್ಯ ಎಂದರು.

ಬಾಬುರಾವ ರಾಜೋಳೆ ಅಧ್ಯಕ್ಷತೆ ವಹಿಸಿದ್ದರು. ಶರಣ ಬಸವ ಗೊರು ಪಾಟೀಲ ಅವರು ಷಟಸ್ಥಲ ಧರ್ಮ ಧ್ವಜಾರೋಹಣ ನೆರವೇರಿಸಿದರು. ಅನೀಲ ಅಕ್ಕಣ ಕಾರ್ಯಕ್ರಮ ಉದ್ಘಾಟಿಸಿದರು.

ಶಾಲಿವಾಹನ ಕಣಜೆ ಇದ್ದರು. ದಿವ್ಯಜ್ಯೋತಿ ಮದಕಟ್ಟಿ ಸ್ವಾಗತಿಸಿದರು. ಪ್ರಜ್ವಲ ಪತಂಗೆ ಅವರು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT