ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್ಟಿಸಿ) ಬೀದರ್ ಜಿಲ್ಲೆಯ ಬಸ್ಸುಗಳ ಮೇಲೆ ಗುಟಕಾ, ತಂಬಾಕು ಹಾಗೂ ಸಿಗರೇಟ್ ಉತ್ಪನ್ನಗಳ ಜಾಹೀರಾತು ಪೋಸ್ಟರ್ಗಳನ್ನು ಅಂಟಿಸಿರುವುದನ್ನು ವಿರೋಧಿಸಿ ಕನ್ನಡ ಸೇನೆಯ ಕಾರ್ಯಕರ್ತರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡ ಸೇನೆಯ ಜಿಲ್ಲಾ ಅಧ್ಯಕ್ಷ ಸುಭಾಷ್ ಕೆ. ನಾಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಸ್ಸುಗಳ ಮೇಲೆ ಅಂಟಿಸಿದ್ದ ತಂಬಾಕು ವಸ್ತುಗಳ ಜಾಹೀರಾತು ಪೋಸ್ಟರ್ಗಳನ್ನು ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಸರ್ಕಾರವೇ ಜೀವಕ್ಕೆ ಹಾನಿಕಾರಕವೆಂದು ಎಚ್ಚರಿಕೆ ನೀಡಿರುವ ತಂಬಾಕು ವಸ್ತುಗಳ ಜಾಹೀರಾತುಗಳನ್ನು ಸಾರ್ವಜನಿಕ ಸಾರಿಗೆ ಬಸ್ಸುಗಳ ಮೇಲೆ ಪ್ರದರ್ಶಿಸುವುದು ಕಾನೂನಿಗೆ ವಿರುದ್ಧವಾದುದು. ಗ್ರಾಮೀಣ ಹಾಗೂ ಹಳ್ಳಿಭಾಗಗಳಲ್ಲಿ ಸಂಚರಿಸುವ ಬಸ್ಸುಗಳ ಮೇಲಿನ ಇಂತಹ ಜಾಹೀರಾತುಗಳು ಯುವಜನರನ್ನು ವ್ಯಸನದತ್ತ ಆಕರ್ಷಿಸಿ ಅವರನ್ನು ದುಶ್ಚಟಕ್ಕೆ ದುಡುವ ಆತಂಕವಿದೆ ಎಂದರು.

ಸಾಮಾಜಿಕ ಸ್ವಾಸ್ಥ್ಯ ಹಾಗೂ ಯುವಜನರ ಭವಿಷ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ತಂಬಾಕು–ಗುಟಕಾ ಜಾಹೀರಾತುಗಳನ್ನು ಕೂಡಲೇ ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದು ಕೆಕೆಆರ್ಟಿಸಿ ಅಧಿಕಾರಿಗಳಿಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ನಿರ್ಣಾ, ತಾಲ್ಲೂಕು ಅಧ್ಯಕ್ಷ ರಾಜು ಮಂಗಲಪೇಟ್, ಜಿಲ್ಲಾ ಉಪಾಧ್ಯಕ್ಷ ಪ್ರಭು ಶೆಟ್ಟಿ ಪಸರಗಿ, ಮಳಸಕಾಂತ್ ವಾಗೆ, ಸೋಮನಾಥ್ ವರಟ್ಟಿ, ಪರಶುರಾಮ್ ಮೈಸೂರು, ಚನ್ನಬಸವ ಘಾಳೆ, ನಾಗಶೆಟ್ಟಿ ಸಜ್ಜನ್ ಶೆಟ್ಟಿ, ಲಕ್ಷ್ಮಣ್ ಅಲ್ಲೂರೆ, ತಿಪ್ಪಾರೆಡ್ಡಿ, ರಮೇಶ್ ಧೂಳು, ಉದಯ್ ಹಿಬಾರೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.