ಗುರುವಾರ , ಆಗಸ್ಟ್ 11, 2022
23 °C
ಸಂಸದ ಭಗವಂತ ಖೂಬಾ ಮಾಹಿತಿ

ಇಂದಿನಿಂದ ಶಿರಡಿಗೆ ರೈಲು ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ಕಾರಣ ಸ್ಥಗಿತಗೊಂಡಿದ್ದ ಬೀದರ್ ಮಾರ್ಗವಾಗಿ ಸಂಚರಿಸುವ ಸಿಕಂದರಾಬಾದ್- ಸಾಯಿನಗರ ಶಿರಡಿ ರೈಲು ಸೇವೆ ಶುಕ್ರವಾರ(ಡಿ.4)ದಿಂದ ಪುನರಾರಂಭಗೊಳ್ಳಲಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಶುಕ್ರವಾರ ಹಾಗೂ ಭಾನುವಾರ ಸಂಜೆ 4.25ಕ್ಕೆ ಸಿಕಂದರಾಬಾದ್‍ನಿಂದ ಹೊರಡುವ ರೈಲು (ಸಂಖ್ಯೆ 07002) ಸಂಜೆ 7.25ಕ್ಕೆ ಬೀದರ್‍ಗೆ ಬರಲಿದೆ. ಮರುದಿನ ಬೆಳಿಗ್ಗೆ 9.10ಕ್ಕೆ ಶಿರಡಿಗೆ ತಲುಪಲಿದೆ. ಅದೇ ದಿನ ಸಂಜೆ (ರೈಲು ಸಂಖ್ಯೆ 07001, ಶನಿವಾರ, ಸೋಮವಾರ) 5.20ಕ್ಕೆ ಸಾಯಿನಗರ ಶಿರಡಿಯಿಂದ ಹೊರಟು ಮರು ದಿನ ನಸುಕಿನ ಜಾವ 5ಕ್ಕೆ ಬೀದರ್‍ಗೆ ಬರಲಿದೆ. ಬೆಳಿಗ್ಗೆ 8.55ಕ್ಕೆ ಸಿಕಂದರಾಬಾದ್‍ಗೆ ತಲುಪಲಿದೆ ಎಂದು ಹೇಳಿದ್ದಾರೆ.

ಡಿ. 5 ರಂದು ಕಾಕಿನಾಡ ಪೋರ್ಟ್-ಸಾಯಿನಗರ ಶಿರಡಿ ರೈಲು(ಸಂಖ್ಯೆ-07206, ಸೋಮವಾರ, ಬುಧವಾರ, ಶನಿವಾರ) ಸೇವೆ ಶುರುವಾಗಲಿದೆ. ಕಾಕಿನಾಡ ಪೋರ್ಟ್‍ನಿಂದ ಬೆಳಿಗ್ಗೆ 6ಕ್ಕೆ ಹೊರಟು ಸಂಜೆ 7.25ಕ್ಕೆ ಬೀದರ್‍ಗೆ ತಲುಪಲಿದೆ. ಮರುದಿನ ಬೆಳಿಗ್ಗೆ 9.10ಕ್ಕೆ ಸಾಯಿನಗರ ಶಿರಡಿ ತಲುಪಲಿದೆ. ಅದೇ ದಿನ ಸಂಜೆ 5.20ಕ್ಕೆ (ರೈಲು ಸಂಖ್ಯೆ- 07205, ಮಂಗಳವಾರ, ಗುರುವಾರ ಭಾನುವಾರ) ಸಾಯಿನಗರ ಶಿರಡಿಯಿಂದ ಹೊರಟು ಮರುದಿನ ನಸುಕಿನ ಜಾವ 5ಕ್ಕೆ ಬೀದರ್‌ ಬರಲಿದೆ ಎಂದು ತಿಳಿಸಿದ್ದಾರೆ.

ಬೀದರ್‌ನ ಸಾಯಿನಗರ ಶಿರಡಿಗೆ ಮಂಗಳವಾರ ಹಾಗೂ ಗುರುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ರೈಲು ಸೇವೆ ಇರಲಿದೆ. ಹಿಂದೆ ರಾತ್ರಿ 8ಕ್ಕೆ ಬರುತ್ತಿದ್ದ ರೈಲು ಈಗ ಸಂಜೆ 7.25ಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದ ಸಾಯಿಬಾಬಾ ಭಕ್ತರು ರೈಲುಗಳ ಸೇವೆ ಪಡೆಯಬೇಕು ಎಂದು ತಿಳಿಸಿದ್ದಾರೆ.
ಈಗಾಗಲೇ ಬೀದರ್-ಯಶವಂತಪುರ ಹಾಗೂ ಬೀದರ್- ಮಚಲಿಪಟ್ನಂ ರೈಲುಗಳ ಸೇವೆ ಪುನರಾರಂಭಗೊಂಡಿದೆ. ಬರುವ ದಿನಗಳಲ್ಲಿ ಉಳಿದ ಮಾರ್ಗಗಳ ರೈಲು ಸೇವೆಯೂ ಶುರುವಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು