ಬೀದರ್: ‘ಎಜ್ಯುಕೇಟ್ ಅ ಚೈಲ್ಡ್, ಎಂಪವರ್ ಅ ಫ್ಯೂಚರ್’ ಘೋಷವಾಕ್ಯದೊಂದಿಗೆ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸಲು ರೋಟರಿ ಕ್ಲಬ್ ಆಫ್ ಸಿಲ್ವರ್ ಸ್ಟಾರ್ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ‘ರೋಟರಿ ಕ್ರಿಕೆಟ್ ಪ್ರೀಮಿಯರ್ ಲೀಗ್’ ಕಲ್ಯಾಣ್ ಜೋನ್ 2.0 ಪಂದ್ಯಾವಳಿ ಇತ್ತೀಚೆಗೆ ಸಮಾರೋಪಗೊಂಡಿತು.

ಅಂತಿಮ ಪಂದ್ಯದಲ್ಲಿ ಜಯಗಳಿಸಿದ ರಾಯಲ್ ಚಾಲೆಂಜರ್ಸ್ ಬೀದರ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ನಿರ್ಮಾಣ್ ನಿಂಜಾಸ್ ತಂಡವು ರನ್ನರ್ ಅಪ್ಗೆ ತೃಪ್ತಿ ಪಡಬೇಕಾಯಿತು.

ಕ್ಲಬ್ ಕಾರ್ಯದರ್ಶಿ ಕಿರಣ್ ಸ್ಯಾಮುವೆಲ್ ಮಾತನಾಡಿ, ವಿವಿಧ ಪ್ರಾಯೋಜಕರ ಹಾಗೂ ಅಟಗಾರರ ಮತ್ತು ತಂಡದ ಮಾಲೀಕರ ಸಹಕಾರದೊಂದಿಗೆ ಬಡಮಕ್ಕಳ ವಿದ್ಯಾನಿಧಿಗಾಗಿ ₹30 ಲಕ್ಷ ದೇಣಿಗೆ ಸಂಗ್ರಹವಾಗಿದೆ. ನಮ್ಮ ತಂಡದ ಒಗ್ಗಟ್ಟಿನ ಕಾರ್ಯದಿಂದ ಕ್ರಿಕೆಟ್ ಪಂದ್ಯಾವಳಿ ಯಶಸ್ಸು ಕಂಡಿದೆ ಎಂದರು.

ಕ್ಲಬ್ ಅಧ್ಯಕ್ಷ ಆದೀಶ್ ಆರ್. ವಾಲಿ ಮಾತನಾಡಿ, ಸಾಮಾಜಿಕ ಕಳಕಳಿಯೊಂದಿಗೆ ಎಲ್ಲರ ಆಟಗಾರರು, ತಂಡದ ಮಾಲೀಕರು, ಪ್ರಾಯೋಜಕರು, ಬೆಂಬಲಿಗರು ಸೇರಿದಂತೆ ವಿವಿಧ ವಿಭಾಗಗಳಿಂದ ಬೆಂಬಲ ಮತ್ತು ಸಹಕಾರದಿಂದ ಈ ಲೀಗ್ ಸಾಧ್ಯವಾಗಿದೆ ಎಂದು ಹೇಳಿದರು.

ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ರಾಯಚೂರು ವಿಭಾಗದ ಸಂಚಾಲಕ ಕುಶಾಲ್ ಪಾಟೀಲ್ ಗಾದಗಿ ಮಾತನಾಡಿ, ನಮ್ಮ ಭಾಗದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಲೀಗ್ನಲ್ಲಿ ವಿಶೇಷ ಪ್ರಶಸ್ತಿ ಗೆದ್ದ ಆಟಗಾರರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಟಿಕೆಟ್ ವ್ಯವಸ್ಥೆ ಮಾಡಿಕೊಡುವುದಾಗಿ ಘೋಷಿಸಿದರು.

ರೋಟರಿ ಕಲ್ಯಾಣ ವಲಯದ ಗವರ್ನರ್ ಹಾವಶೆಟ್ಟಿ ಪಾಟೀಲ್, ಪತ್ರಕರ್ತರಾದ ಶಿವಶರಣಪ್ಪ ವಾಲಿ, ಡಾ. ರಜನೀಶ ವಾಲಿ, ಕ್ಲಬ್ ಸಲಹೆಗಾರ ಬಸವರಾಜ ಧನ್ನೂರ, ಕ್ಲಬ್ ಉಪಾಧ್ಯಕ್ಷ ಅನಂದ ಕೊಟರ್ಕಿ, ಜಂಟಿ ಕಾರ್ಯದರ್ಶಿ ಭಾವೇಶ ಪಾಟೀಲ್, ಲೀಗ್ ಯೋಜನಾ ನಿರ್ದೇಶಕಿ ಸ್ಪೂರ್ತಿ ಧನ್ನೂರ, ಕ್ಲಬ್ ಖಜಾಂಚಿ ಅಂಬರೇಶ ಅಂಬೇಸಾಗೆ, ಅಭಿಷೇಕ ಪೋಲಾ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.