ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆ: ಸಂಜೀವಕುಮಾರ ಅತಿವಾಳೆ ನಾಮಪತ್ರ

Last Updated 7 ಏಪ್ರಿಲ್ 2021, 4:55 IST
ಅಕ್ಷರ ಗಾತ್ರ

ಬೀದರ್: ಮೇ 9ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಡಾ.ಸಂಜೀವಕುಮಾರ ಅತಿವಾಳೆ ಇಲ್ಲಿನ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಚುನಾವಣಾಧಿಕರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿ, ‘ಶಿಕ್ಷಕನಾಗಿ, ಸಾಹಿತಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಜೊತೆಗೆ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ನಾಗಿ 20 ವರ್ಷಗಳಿಂದ ನಿರಂತರವಾಗಿ ನಾಡು-ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವೆ’ ಎಂದರು.

‘2008-2011 ಮತ್ತು 2012-2015 ಎರಡು ಅವಧಿಗೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ ಅನೇಕ ಜಿಲ್ಲಾ, ತಾಲ್ಲೂಕು, ವಲಯ, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು, ಮಹಾಕವಿಗಳ ಕುರಿತು ವಿಚಾರಗೋಷ್ಠಿಗಳು, ಸುಮಾರು 200ಕ್ಕೂ ಹೆಚ್ಚು ಪ್ರತಿಭಾ ಪರಿಚಯ ಕಾರ್ಯಕ್ರಮಗಳು, ಕವಿಗೋಷ್ಠಿಗಳು, ಜಿಲ್ಲಾ ಮಟ್ಟದ ಸಂಶೋಧನಾ ಕಮ್ಮಟ ಸೇರಿದಂತೆ ಹಲವು ಕನ್ನಡ ಭಾಷೆ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ ಮಹತ್ವದ ಪಾತ್ರವನ್ನು ನಿರ್ವಹಿಸಿರುವುದು ತಮ್ಮೆದುರಿಗಿದೆ’ ಎಂದು ಹೇಳಿದರು.

‘ಬರಹಗಾರ, ಸಾಹಿತಿ ಮತ್ತು ಕವಿಯೂ ಆದ ನಾನು ‘ಸ್ವಾತಂತ್ರ್ಯ’ ಕವನ ಸಂಕಲನ, ‘ಚೌಕಟ್ಟಿನಾಚೆ’ ಲೇಖನಗಳ ಸಂಕಲನ ಪ್ರಕಟಿಸಿದ್ದೇನೆ’ ಎಂದು ತಿಳಿಸಿದರು.

ಹಿರಿಯರಾದ ಪ್ರೊ.ಬಿ. ಕೆ. ಮಠಪತಿ, ಬಸವರಾಜ ಬಿರಾದಾರ, ನರಸಪ್ಪ ಹಾಲೋಳಿ, ಡಾ. ಶಾಮರಾವ ನೆಲವಾಡೆ, ಜಗದೀಶ್ವರ ಬಿರಾದಾರ, ವೈಜಿನಾಥ ಬಾಬಶೆಟ್ಟೆ, ನಾಗಲಿಂಗಯ್ಯ ಸ್ವಾಮಿ, ತುಕ್ಕಪ್ಪಾ ಚೊಳ, ಪ್ರಲ್ಹಾದ್ ಐನೋಳೆ, ರಾಜಶೇಖರ, ಮಲ್ಲಿಕಾರ್ಜುನ ವಗ್ಗೆ, ಸುರೇಂದ್ರ ಕುಲಕರ್ಣಿ, ನಾಗರಾಜ ಸ್ವಾಮಿ, ಸಚಿನ್‌ ಮಲಕಾಪೂರ, ಶ್ರೀಪತಿ ಮೇತ್ರೆ, ಕೀಶೋರ ಪಾಠಕ್, ರಾಜಶೇಖರ, ಸೂರ್ಯಕಾಂತ ನಿರ್ಣಾಕರ್, ಆತ್ಮನಂದ ಬಂಬುಳಗಿ, ರಾಮಶೆಟ್ಟಿ ಐನೋಳಿ, ಮನೋಹರ ಕಾಶಿ, ಶರಣಪ್ಪ ನಾಗೂರೆ, ಅರ್ಜುನಸಿಂಗ್ ಪಾಟೀಲ, ಆಕಾಶ ಸಂಭಾಜಿ, ಬಸಪ್ಪ ಪೂಜಾರಿ, ರಾಜಕುಮಾರ ಹಾಲಗೊರಟೆ, ಧರ್ಮರಾಜ, ಮಹ್ಮದ್ ಇಲಿಯಾಸ್, ಕಲ್ಲಪ್ಪ ಬೆನಕನಳ್ಳಿಕರ್, ಮಲ್ಲಿಕಾರ್ಜುನ ಸಿಕೆನಪೂರೆ, ಅಂಬಾದಾಸ ಜಾಲಿ, ದಿಲೀಪ ಪಾಂಚಾಳ, ಮನೋಹರ ಶಿರನೂರ, ಬಾಲಾಜಿ ಇಸ್ಲಾಂಪೂರ, ಕೃಷ್ಣಮೂರ್ತಿ ನೌಬಾದ, ಶಿವಕುಮಾರ ಕಿಂಡಿ, ಶಾಲಿವಾನ ಸಿದಬಟ್ಟೆ, ದಿಗಂಬರ ಮೇತ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT