ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ನಲ್ಲಿ ಶಾಹೀನ್‌ ಉತ್ತಮ ಸಾಧನೆ: 8 ವಿದ್ಯಾರ್ಥಿಗಳಿಗೆ 700ಕ್ಕೂ ಅಧಿಕ ಅಂಕ

Published 6 ಜೂನ್ 2024, 15:38 IST
Last Updated 6 ಜೂನ್ 2024, 15:38 IST
ಅಕ್ಷರ ಗಾತ್ರ

ಬೀದರ್‌: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ನಗರದ ಶಾಹೀನ್‌ ಸಂಸ್ಥೆಯ ಎಂಟು ವಿದ್ಯಾರ್ಥಿಗಳು 700ಕ್ಕೂ ಅಧಿಕ ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಮಹಮ್ಮದ್ ಇಬ್ರಾಹಿಂ ಅಲ್ತಾಫ್, ಖಾನ್ ಸಫ್ವಾನ್ ಮಹ್ಮಮದ್ ಆಸಿಫ್ ಹಾಗೂ ಶಿಫಾ ಶಮೀಮ್ ತಲಾ 705 ಅಂಕ, ರುಮೈಸಾ ಅಲಿ ಖಾನ್ 701, ಮನಿಯಾರ್ ಮಹಮ್ಮದ್ ಬಾಶರ್, ರೋಹಿತ್, ಖಾನ್ ಹಬಿಬುಲ್ಲಾ ಮನ್ಸೂರ್ ಹಾಗೂ ರಿಷಿಕೇಶ್ ಕಾಮತಿಕರ್ 700 ಅಂಕ ಗಳಿಸಿದ್ದಾರೆ.

ಕಾಲೇಜಿನ ಮೂವರು ವಿದ್ಯಾರ್ಥಿಗಳು 705 ಅಂಕ, ಎಂಟು ವಿದ್ಯಾರ್ಥಿಗಳು 700ಕ್ಕೂ ಅಧಿಕ, 38 ವಿದ್ಯಾರ್ಥಿಗಳು 680 ಕ್ಕೂ ಅಧಿಕ, 161 ವಿದ್ಯಾರ್ಥಿಗಳು 650ಕ್ಕೂ ಹೆಚ್ಚು, 431 ವಿದ್ಯಾರ್ಥಿಗಳು 600ಕ್ಕೂ ಮೇಲೆ ಹಾಗೂ 666 ವಿದ್ಯಾರ್ಥಿಗಳು 575ಕ್ಕೂ ಅಧಿಕ ಅಂಕ ಗಳಿಸಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಲೇಜಿಗೆ ಈ ವರ್ಷ ನಿರೀಕ್ಷೆಯಂತೆ ಅತ್ಯುತ್ತಮ ಫಲಿತಾಂಶ ಬಂದಿದೆ. 2023 ಹಾಗೂ 2024 ರಲ್ಲಿ ಕಾಲೇಜಿನ ತಲಾ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿದ್ದರೆ, ಈ ಬಾರಿ 550ಕ್ಕೂ ಅಧಿಕ ವಿದ್ಯಾರ್ಥಿಗಳು ಸೀಟು ಗಿಟ್ಟಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಕಾಲೇಜಿನ ನಾಲ್ಕು ಸಾವಿರ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ವೈದ್ಯರಾಗಿ ಸೇವೆ ಸಹ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮನಿಯಾರ್‌
ಮನಿಯಾರ್‌
ಇಬ್ರಾಹಿಂ ಅಲ್ತಾಫ್‌
ಇಬ್ರಾಹಿಂ ಅಲ್ತಾಫ್‌
ಮಹಮ್ಮದ್‌ ಆಸಿಫ್‌
ಮಹಮ್ಮದ್‌ ಆಸಿಫ್‌
ರೋಹಿತ್‌
ರೋಹಿತ್‌
ಹೃಷಿಕೇಶ್‌
ಹೃಷಿಕೇಶ್‌
ರುಮೈಸಾ
ರುಮೈಸಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT