ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈಜ್ಞಾನಿಕ ಚಿಂತನೆ ಬದುಕಿಗೆ ಪ್ರೇರಣೆಯಾಗಲಿ: ಶರಣಬಸವ ಸ್ವಾಮೀಜಿ

Published 8 ಜುಲೈ 2024, 16:29 IST
Last Updated 8 ಜುಲೈ 2024, 16:29 IST
ಅಕ್ಷರ ಗಾತ್ರ

ಔರಾದ್: ‘ಮೂಢ ನಂಬಿಕೆ, ಕಂದಾಚಾರಗಳಿಂದ ದೂರ ಉಳಿದು ಬಸವ ತತ್ವದಲ್ಲಿರುವ ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಬೆಳಗಾವಿಯ ಶರಣಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಂತಪುರ ಅನುಭವ ಮಂಟಪದಲ್ಲಿ ಭಾನುವಾರ ಸಂಜೆ 81ನೇ ಅನುಭವ ಮಂಟಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಮನುಷ್ಯನ ಜೀವನದಲ್ಲಿ ಕಷ್ಟ-ಸುಖ, ಟೀಕೆ-ಟಿಪ್ಪಣೆ ಬರುವುದು ಸಹಜ. ಇವು ಮೆಟ್ಟಿ ನಿಲ್ಲಬೇಕು. ಅದಕ್ಕಾಗಿ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಇಂತಹ ಸತ್ಸಂಗದಿಂದ ಮನುಷ್ಯನಲ್ಲಿ ಗಟ್ಟಿತನ ಬರುತ್ತದೆ’ ಎಂದು ತಿಳಿಸಿದರು.

‘ಈ ಬೀದರ್‌ನಂತಹ ಗಡಿ ಭಾಗದಲ್ಲಿ ಬಸವತತ್ವ ಹಾಗೂ ಕನ್ನಡ ಉಳಿಯಲು ಭಾಲ್ಕಿ ಮಠದ ಪಾತ್ರ ದೊಡ್ಡದು. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ಅದಕ್ಕಾಗಿ ತಮ್ಮ ಬದುಕು ಮೀಸಲಿಟ್ಟಿದ್ದರು’ ಎಂದರು.

ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಡಾ. ಫ.ಗು ಹಳಕಟ್ಟಿ ಅವರು ನೀಡಿದ ವಚನ ಸಾಹಿತ್ಯದಿಂದ ಬಸವಣ್ಣನವರು ಹಾಗೂ ಬಸವಾದಿ ಶರಣರನ್ನು ಸ್ಪಷ್ಟವಾಗಿ ಅರಿಯಲು ಸಾಧ್ಯವಾಗಿದೆ’ ಎಂದು ಹೇಳಿದರು.

ಬಸವರಾಜ ಬಿರಾದರ, ಶಿವಕಾಂತ ಸ್ವಾಮಿ, ಸಂಗಮೇಶ ಬ್ಯಾಳೆ, ಮಾರುತಿ ಗಾದಗೆ, ಮುಖ್ಯ ಶಿಕ್ಷಕ ಶಿವಕುಮಾರ ಹಿರೇಮಠ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಪ್ರಕಾಶ್ ಮಿಠಾರೆ, ಬಾಬುರಾವ್ ಮುಚ್ಚಳಂಬೆ, ನಾಗಶೆಟ್ಟಿ ಬಿಜ್ಜಲವಾಡೆ, ಹೌಗಿರಾವ ಶರಣರು, ಗೋವಿಂದ್ ರೆಡ್ಡಿ, ಬಸವರಾಜ ಪಾಟೀಲ್, ವಿಜಯಕುಮಾರ ನಿಟ್ಟೂರೆ, ಪ್ರಕಾಶ ದೇಶಮುಖ್, ಶ್ರೀವರ್ಧನ್ ಎಕ್ಕಳೆ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT