ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಗಳು ಭಾವೈಕ್ಯದ ಸಂಕೇತ

ಹುಲಸೂರ: ಡಾ.ಶಿವಾನಂದ ಸ್ವಾಮೀಜಿ ಅಭಿಮತ
Last Updated 5 ಏಪ್ರಿಲ್ 2022, 5:16 IST
ಅಕ್ಷರ ಗಾತ್ರ

ಹುಲಸೂರ: ‘ಜಾತ್ರೆಗಳು ಭಾವೈಕ್ಯದ ಸಂಕೇತ’ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ವೀರಭದ್ರೇಶ್ವರ ಜಾತ್ರಾಮಹೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಾತ್ರೆ ಎಂದರೆ ಕೇವಲ ಗುಂಪು ಸೇರಿ ಕುಣಿದು ಕುಪ್ಪಳಿಸುವುದಲ್ಲ. ಹಲವು ಸಮುದಾಯದವರು ಒಂದು ಕಡೆ ಸೇರಿ ಸಂಪ್ರದಾಯ ಬದ್ಧವಾದ ಸಂಸ್ಕಾರಗಳನ್ನು ಆಚರಣೆಗೆ ತರುವುದರಿಂದ ಸೌಹಾರ್ದತೆ ಬೆಳೆಯುತ್ತದೆ. ಹಲವು ಸಮುದಾಯಗಳ ಆಚರಣೆಗಳಿಗೆ ಗೌರವ ದೊರೆಯುತ್ತದೆ ಎಂದು ಅವರು ಹೇಳಿದರು.

ಶಾಸಕ ಶರಣು ಸಲಗರ ಮಾತನಾಡಿ,‘ಕೊವೀಡ್ ಕಾರಣಕ್ಕೆ ಕಳೆದ ಮೂರು ವರ್ಷ ಜಗತ್ತಿಗೆ ಕೆಟ್ಟಕಾಲ ಆವರಿಸಿತ್ತು. ಆದರೆ ಗ್ರಾಮಗಳನ್ನು ಕಾಯುವ ದೇವರುಗಳ ಆಶೀರ್ವಾದದಿಂದ ಹಂತ ಹಂತವಾಗಿ ಈಗ ದೇಶ ಸಹಜ ಸ್ಥಿತಿಗೆ ಬರುತ್ತಿದೆ. ಜಾತ್ರೆ ಉತ್ಸವಗಳು ಇನ್ನೂ ವೈಭವದಿಂದ ಆಚರಣೆ ಮಾಡುವಂತಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಹಾಗೂ ಬಸವಕಲ್ಯಾಣ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಮಾತನಾಡಿದರು.

ವಿಜಯಪುರದ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜಿ ಅವರು ದಕ್ಷ ಮತ್ತು ವೀರಭದ್ರನ ಜೀವನದ ಕುರಿತು ತಿಳಿಸಿದರು.

ಸಾಯಗಾಂವ ವಿರಕ್ತ ಮಠದ ಶಿವಾನಂದ ಸ್ವಾಮೀಜಿ, ಸಂಗೀತಾ ಮಾತಾಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವಕುಮಾರ ಪಿ.ಭೂಸಾರೆ, ಉಪಾಧ್ಯಕ್ಷೆ ಸರಸ್ವತಿ ಬಾಬುರಾವ ಬಾಲಕುಂದೆ, ವೀರಭದ್ರೇಶ್ವರ ದೇವಾಲಯದ ಪಂಚ ಸಮಿತಿ ಅಧ್ಯಕ್ಷ ಕಾಶಿನಾಥ ಪಾರಶೇಟ್ಟೆ, ಉಪಾಧ್ಯಕ್ಷ ಚಂದ್ರಕಾಂತ ದೆಟ್ನೆ, ಕಾರ್ಯದರ್ಶಿ ಬಂಡುರಾವ ಪಾಟೀಲ, ಬಾಬುರಾವ ಗೌಡಗಾಂವೆ, ಪಿಕೆಪಿಎಸ್‌ ಅಧ್ಯಕ್ಷ ಓಂಕಾರ ಪಟ್ನೆ, ಬಾಬುರಾವ ಬಾಲಕುಂದೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ ಕಾಡಾದಿ ಇದ್ದರು. ಪರಶುರಾಮ ರಾಠೋಡ ನಿರೂಪಿಸಿದರು. ರಾಜಕುಮಾರ ನಿಡೋದೆ ಅವರು ಸ್ವಾಗತಿಸಿದರು.

ಕಿರಣಕುಮಾರ ಹಿರೇಮಠ ಹಾಗೂ ಸಂಗಮೇಶ ಹೂಗಾರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT