ಬೀದರ್: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಫಲರಾದಾಗಲೆಲ್ಲಾ ಜಾತಿ ಅಸ್ತ್ರ ಬಳಸುತ್ತಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದೆ ಲಿಂಗಾಯತರು–ವೀರಶೈವರನ್ನು ಒಡೆಯುವ ಕೆಲಸ ಮಾಡಿದ್ದರು. ಈಗ ಎಲ್ಲಾ ಜಾತಿ ಒಡೆಯಲು ಮುಂದಾಗಿದ್ದಾರೆ’ ಎಂದರು.

‘ಒಕ್ಕಲಿಗರು ಮತ್ತು ಲಿಂಗಾಯತರಲ್ಲಿ ಬೇರೆ ಬೇರೆ ಪಂಗಡಗಳಿವೆ. ಆದರೆ, ಹೊಸದಾಗಿ ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗಾಣಿಗ ಕ್ರಿಶ್ಚಿಯನ್, ವೀರಶೈವ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್ ಎಲ್ಲಿಂದ ಬಂದರು?’ ಎಂದು ಪ್ರಶ್ನಿಸಿದರು.

‘ಹಿಂದೂ ಸಮಾಜದವರು ಜಾತಿ–ಧರ್ಮ ಬಿಟ್ಟು ಒಟ್ಟಾಗುವ ಕಾಲ ಬಂದಿದೆ. ಇಲ್ಲದಿದ್ದರೆ ನಮ್ಮನ್ನು ವಿಂಗಡಿಸುತ್ತ ಹೋಗುತ್ತಾರೆ. ಬ್ರಿಟಿಷರಿಗೆ ಯಾವ ರೀತಿಯ ಮನಃಸ್ಥಿತಿ ಇತ್ತೋ ಅದೇ ಮನಃಸ್ಥಿತಿ ಸಿದ್ದರಾಮಯ್ಯನವರ ಸರ್ಕಾರ ಹೊಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.