ಬುಧವಾರ, ಮೇ 12, 2021
25 °C

ಸಮಾಜದ ಒಳಿತಿಗೆ ಶ್ರಮಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ: ‘ಯುವ ಜನಾಂಗ ಶ್ರದ್ಧೆಯಿಂದ ಓದಿನಲ್ಲಿ ತೊಡಗುವ ಮೂಲಕ ಗುರಿ ಸಾಧಿಸಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ತಾಲ್ಲೂಕಿನ ದುಬಲಗುಂಡಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗಾಗಿ ಶನಿವಾರ ಆಯೋಜಿಸಿದ್ದ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ಜನಾಂಗ ಆಧ್ಯಾತ್ಮದ ಕಡೆಗೆ ಒಲವು ಬೆಳಸಿಕೊಳ್ಳಬೇಕು. ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ ಹಾಗೂ ಸಹಕಾರದಿಂದ ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದು ಹೇಳಿದರು.

ಮಹಾರುದ್ರಪ್ಪ ಕುಡಂಬಲ ಗುರುಸ್ವಾಮಿಗಳ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಶ್ರೀವಿಷ್ಣೇಶ್ವರ, ಸುಬ್ರಹ್ಮಣ್ಯ, ಅಯ್ಯಪ್ಪ ಸ್ವಾಮಿಗಳಿಗೆ ಅಭಿಷೇಕ ನೆರವೇರಿಸಿದ ಅಯ್ಯಪ್ಪ ಭಕ್ತರು ಮಹಾಶಾಸ್ತ್ರ, ಲಕ್ಷಾರ್ಚನೆ, ವಿಷ್ಣು ಸಹಸ್ರ ಅಷ್ಟೋತ್ತರ ಶತನಾಮಾವಳಿ ಪೂಜೆ ಕೈಗೊಂಡರು.

ಮಹಾಂತೇಶ ಪೂಜಾರಿ, ವಿನಾಯಕ ಯಾದವ, ಮಲ್ಲಿಕಾರ್ಜುನ ಸೀಗಿ, ತಾ.ಪಂ ಸದಸ್ಯ ಪರಮೇಶ ಕಾಳಮದರಗಿ, ಸಚಿನ್‌ ಪಾಟೀಲ, ಬಾಬು ಟೈಗರ್, ಶರಣು ಮಠಪತಿ, ನಾಗರಾಜ ಚಂದನಕೇರಿ, ಚೇತನ ಡೆಗೆರಿ, ಪ್ರವೀಣ ಬೊಮ್ಮಣಿ, ಅಂತು ಗಂಗಾ, ಸತೀಷ ಪಸರ್ಗಿ, ಅಮರ ನಿಂಬೂರೆ, ಸಂತೋಷ ಉದಗೀರೆ, ಬಸವರಾಜ ಪಾಟೀಲ, ಅಭಿಷೇಕ ಪಟೀಲ, ರಾಕೇಶ, ಲೋಕೇಶ್ ದಿಗಂಬರ, ಭಗತ ಠಾಕೋರ, ರಾಹುಲ ಪರಿಟ್ ಹಾಗೂ ನಾಗೇಶ ಶೆರಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು