ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರಿಂದ ಬೀದರ್- – ತಿರುಪತಿ ವಿಶೇಷ ರೈಲು

ಪ್ರಯೋಜನಕ್ಕೆ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮನವಿ
Last Updated 28 ಅಕ್ಟೋಬರ್ 2022, 8:49 IST
ಅಕ್ಷರ ಗಾತ್ರ

ಬೀದರ್: ಅಕ್ಟೋಬರ್ 30ರಿಂದ ಆರು ಭಾನುವಾರ ಬೀದರ್‌ನಿಂದ ಹುಮನಾಬಾದ್, ಕಲಬುರಗಿ ಮಾರ್ಗವಾಗಿ ತಿರುಪತಿಗೆ ವಿಶೇಷ ರೈಲು ಪ್ರಾಯೋಗಿಕವಾಗಿ ಸಂಚರಿಸಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಈಗಾಗಲೇ ಅಕ್ಟೋಬರ್ ತಿಂಗಳ ಐದು ಭಾನುವಾರ ಬೀದರ್‌ನಿಂದ ವಿಕಾರಾಬಾದ್ ಮಾರ್ಗವಾಗಿ ತಿರುಪತಿಗೆ ರೈಲು ಸಂಚರಿಸುತ್ತಿದೆ. ಇದೀಗ ಪ್ರಾಯೋಗಿಕ ರೈಲು ಸಂಚಾರ ಕೂಡ ಆರಂಭವಾಗಲಿದೆ ಎಂದು ಹೇಳಿದ್ದಾರೆ.

07414 ಸಂಖ್ಯೆಯ ರೈಲು ಅಕ್ಟೋಬರ್ 30, ನವೆಂಬರ್ 6, 13, 20, 27 ಮತ್ತು ಡಿಸೆಂಬರ್ 4 ರಂದು ಮಹಾರಾಷ್ಟ್ರದ ಜಾಲ್ನಾದಿಂದ ಬೆಳಿಗ್ಗೆ 11.50ಕ್ಕೆ ಹೊರಟು ಪರ್ತೂರ, ಪರಭಣಿ ಜಂಕ್ಷನ್, ಲಾತೂರ ರಸ್ತೆ, ಉದಗಿರ ಮಾರ್ಗವಾಗಿ ಸಂಜೆ 7.05ಕ್ಕೆ ಭಾಲ್ಕಿ, 7.40ಕ್ಕೆ ಬೀದರ್ ತಲುಪಲಿದೆ. ರಾತ್ರಿ 8.50ಕ್ಕೆ ಹುಮನಾಬಾದ್‍ಗೆ ತಲುಪಿ, ತಾಜ್ ಸುಲ್ತಾನಪುರ, ಕಲಬುರಗಿ, ವಾಡಿ, ರಾಯಚೂರು, ಗುಂತಕಲ್, ರೇನಿಗುಂಟಾ ಮಾರ್ಗವಾಗಿ ಮರುದಿನ ಬೆಳಿಗ್ಗೆ 9.05ಕ್ಕೆ ತಿರುಪತಿ ತಲುಪಲಿದೆ ಎಂದು
ತಿಳಿಸಿದ್ದಾರೆ.

ರೈಲು ಸಂಖ್ಯೆ 07413 ನವೆಂಬರ್ 1, 8, 15, 22, 29 ರ ಮಂಗಳವಾರದಂದು ತಿರುಪತಿಯಿಂದ ಸಂಜೆ 6.35ಕ್ಕೆ ಹೊರಟು ಬಂದ ಮಾರ್ಗವಾಗಿ ಮರುದಿನ ಬೆಳಿಗ್ಗೆ 6.10ಕ್ಕೆ ಹುಮನಾಬಾದ್, ಬೆಳಿಗ್ಗೆ 7.10ಕ್ಕೆ ಬೀದರ್, ಬೆಳಿಗ್ಗೆ 8.04ಕ್ಕೆ ಭಾಲ್ಕಿಗೆ ಬರಲಿದೆ. ಅಲ್ಲಿಂದ ಉದಗಿರ, ಲಾತೂರ ಮೂಲಕ ಸಂಜೆ 6ಕ್ಕೆ ಜಾಲ್ನಾಕ್ಕೆ ತಲುಪಲಿದೆ ಎಂದು ಹೇಳಿದ್ದಾರೆ.

ವಿಶೇಷ ರೈಲಿನ ಮೂಲಕ ಸೋಮವಾರ ಬೆಳಿಗ್ಗೆ ತಿರುಪತಿಗೆ ತೆರಳುವ ಭಕ್ತರಿಗೆ ಸುಮಾರು 30 ಗಂಟೆ ಕಾಲಾವಕಾಶ ಇರಲಿದೆ. ಈ ಅವಧಿಯಲ್ಲಿ ದೇವರ ದರ್ಶನ ಮುಗಿಸಿಕೊಂಡು ಮಂಗಳವಾರ ಸಂಜೆ ಇದೇ ರೈಲಿನ ಮೂಲಕ ಬೀದರ್‌ಗೆ ಮರಳಬಹುದು ಎಂದು ಅವರು ತಿಳಿಸಿದ್ದಾರೆ.

ಕಾರಾಗೃಹಕ್ಕೆ ಖೂಬಾ ಭೇಟಿ

ಪೋರ್ಟ್ ಬ್ಲೇರ್ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿರುವ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ, ಕೋಶಿಯ ಸೆರೆಮನೆಗೆ (ಕಾಲಾಪಾನಿ ಕಾರಾಗೃಹ) ಕೇಂದ್ರ ಸಚಿವ ಭಗವಂತ ಖೂಬಾ ಕುಟುಂಬದೊಂದಿಗೆ ಭೇಟಿ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ವೀರ ಸಾವರ್ಕರ್ ಅವರು ಬಂಧಿಯಾಗಿದ್ದ ಕಾರಾಗೃಹ ವೀಕ್ಷಿಸಿ, ಸಾವರ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು. ಸಚಿವರ ಪತ್ನಿ ಶೀಲಾ, ಪುತ್ರಿಯರಾದ ವಸುಂಧರಾ, ಮಣಿಕರ್ಣಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT