ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಿ’

ಭೀಮನೊಲುಮೆಯ ಶಾಯರಿ ಪುಸ್ತಕ ಬಿಡುಗಡೆ
Last Updated 6 ಜನವರಿ 2020, 11:09 IST
ಅಕ್ಷರ ಗಾತ್ರ

ಹುಮನಾಬಾದ್: ಯುವ ಸಾಹಿತಿ ಭೀಮಶೇನ ಗಾಯಕವಾಡ ಅವರ ರಚಿಸಿದ ಭೀಮನೊಲುಮೆಯ ಶಾಯರಿ ಮತ್ತು ಗಜಲ್‍ಗಳು ಪುಸ್ತಕ ಲೋಕಾರ್ಪಣೆ, ಕವಿಗೋಷ್ಟಿ ಮತ್ತು ಸನ್ಮಾನ ಸಮಾರಂಭ ಸಮೀಪದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ಜರುಗಿತು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವ ಸಾಹಿತಿ ಭೀಮಶೇನೆ ಗಾಯಕವಾಡ, ಅವರು ಸಾಕಷ್ಟು, ಕವನ ಸಂಕಲಗಳನ್ನು ರಚಿಸಿದ್ದಾರೆ ಎಂದರು.

ಪ್ರತಿಯೂಬ್ಬರೂ ಯುವ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಕನ್ನಡ ಸಾಹಿತ್ಯ, ಸಂಸ್ಕ್ರತಿ, ಆಚಾರ ವಿಚಾರಗ ಳನ್ನು ಉಳಿಸಿ ಬೆಳೆಸಬೇಕು ಎಂದರು.

ಭಾಷಾಂತರ ಇಲಾಖೆಯ ಉಪನಿರ್ದೇಶಕ ಭಕ್ತರಾಜ ಚಿತ್ತಾಪುರ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪುಸ್ತಕಕೊಂಡು ಓದುವ ಹವ್ಯಾಸ ಯುವ ಜನಾಂಗದಲ್ಲಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಸಕ್ರೀಯ ಗೊಂಡಿರುವುದರಿಂದ ಯುವ ಸಾಹಿತಿಗಳು ಪುಸ್ತಕ ಹೊರತರುವುದರ ಜತೆಗೆ ತಮ್ಮಲ್ಲಿರುವ ಕೃತಿ, ಕವನ ಸಂಕಲನಗಳು, ಶಾಹಿರಿಗಳುನ್ನು ಡಿಜಿಟಲೀಕರಣ ಗೊಳಿಸುವಂತಹ ಯೋಜನೆ ರೂಪಿಸಬೇಕು ಎಂದರು.

ಕಲಬುರ್ಗಿ ಎನ್.ವಿ.ಕಾಲೇಜಿನ ಪ್ರಾಚಾರ್ಯ ಡಾ.ಸೂರ್ಯಕಾಂತ ಸುಜ್ಯಾತ ಅವರು ಕೃತಿ ಪರಿಚಯಿಸಿದರು.

ಬೇಲೂರು ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪುಸ್ತಕ
ಪ್ರಾಧಿಕಾರದ ಮಾಜಿ ಸದಸ್ಯೆ ಡಾ.ಜಯದೇವಿ ಗಾಯಕವಾಡ, ರಾಜೋಳಾ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಅರ್ಜುನ ಸಿತಾಳಗೇರಾ, ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಕಾರ್ಯದರ್ಶಿ ಗುಂಡಪ್ಪ ದೊಡ್ಡಮನಿ, ಸಾಹಿತಿ ಭೀಮಶೇನೆ ಗಾಯಕವಾಡ ಇದ್ದರು.

ಶಾಂತಾಬಾಯಿ ರಾಠೋಡ ಸ್ವಾಗತಿ ಸಿದರು. ಪ್ರಾಧ್ಯಾಪಕ ಡಾ.ಗವಿಸಿದ್ದಪ್ಪ ಪಾಟೀಲ ನಿರೂಪಿಸಿದರು. ಡಾ.ಮಲ್ಲಿ ಕಾರ್ಜುನ ಜಾಬಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT