ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದರು ಭಾರತೀಯ ಆಧ್ಯಾತ್ಮಿಕ ಜ್ಞಾನ ಪ್ರಚಾರಕ

Last Updated 15 ಜನವರಿ 2023, 8:22 IST
ಅಕ್ಷರ ಗಾತ್ರ

ಬೀದರ್: ಸ್ವಾಮಿ ವಿವೇಕಾನಂದರು ಭಾರತೀಯ ಅಧ್ಯಾತ್ಮಿಕ ಜ್ಞಾನವನ್ನು ವಿದೇಶಿಯರಿಗೆ ಪರಿಚಯಿಸಿದವರು. ಅವರೊಬ್ಬ ಆಧ್ಯಾತ್ಮಿಕ ಜ್ಞಾನ ಪ್ರಚಾರಕ ಎಂದು ಪ್ರೊ. ಕಲ್ಮಠ ಅವರು ಬಣ್ಣಿಸಿದರು.

ನಗರದ ವಿವೇಕಾನಂದ ಕಾಲೊನಿ ನಿವಾಸಿ ಶಿವಪುತ್ರ ಶರಣಪ್ಪ ಪಾಟೀಲರ ನಿವಾಸದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿಯ ಸರ್ವಧರ್ಮ ಸಮನ್ವಯತೆ, ಪರಧರ್ಮ ಸಹಿಷ್ಣುತೆ, ಸರ್ವ ಜನಾಂಗದ ಏಳಿಗೆ ಮತ್ತು ಸೌಹಾರ್ದತೆಯನ್ನು ವಿವೇಕಾನಂದರು ವಿದೇಶಿಯರಿಗೆ ಮನವರಿಕೆ ಮಾಡಿದರು. ಯುವಕರಲ್ಲಿ ದೈಹಿಕ ಸಧೃಢತೆ ಮತ್ತು ಮಾನಸಿಕ ಬಲ ತುಂಬಿದರು ಎಂದು ತಿಳಿಸಿದರು.

ಶಿವಪುತ್ರಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಶರಣಪ್ಪ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗಣಪತರಾವ್ ಧಡ್ಡೆ, ರೇವಣಸಿದ್ದಪ್ಪ, ಸುನೀಲ ಅಮಲಾಪುರೆ, ಬಕ್ಕಪ್ಪ ಶೇರಿಕಾರ, ರವಿಕುಮಾರ ಶೆಂಬೆಳ್ಳಿ, ರಾಹುಲ್ ಹುಜಬಾರೆ, , ಭಗವನದಾಸ ರಂಡಾಳೆ, ಶರಣಪ್ಪ ಮಲಗೊಂಡ, ಶಿವರಾಜ ತಲಾಟಿ ಇದ್ದರು.

ಸೂರ್ಯಕಾಂತ ಮಾಳಗೆ ಸ್ವಾಗತಿಸಿದರು. ಸುಭಾಷ ಹುಲಸೂರೆ ನಿರೂಪಿಸಿದರು. ವಿಠಲ ಪಂಚಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT