‘ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಿ’

ಹುಮನಾಬಾದ್: ಇಲ್ಲಿಯ ವಿವಿಧ ಬಡಾವಣೆಗಳಲ್ಲಿ ಮಲೀನ ನೀರು ಹರಿದು ಹೋಗದೆ ಚರಂಡಿಗಳು ತುಂಬಿವೆ. ಗಲೀಜು ನೀರು ರಸ್ತೆಗಳ ಮೇಲೆ ನಿಂತು ಗಬ್ಬು ನಾರುತ್ತಿದೆ.
‘ಈಗಾಗಲೇ ಕೊರೊನಾ ಸೋಂಕಿನಿಂದ ಸಾರ್ವಜನಿಕರ ಬದುಕು ಹೈರಾಣಾಗಿದೆ. ಚರಂಡಿಗಳಲ್ಲಿ ಗಲೀಜು ನೀರು ತುಂಬಿರುವುದರಿಂದ ಮತ್ತೆ ಸಾಂಕ್ರಾಮಿಕ ರೋಗಗಳ ಎಂಬ ಭಯ ಕಾಡುತ್ತಿದೆ. ಜೋರಾಗಿ ಮಳೆ ಬಂದರೆ ರಸ್ತೆಯ ಮೇಲೆ ಕೊಳಚೆ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುತ್ತದೆ’ ಎಂದು ಇಲ್ಲಿಯ ತೆಳಪೇಟೆ ಬಡಾವಣೆಯ ನಿವಾಸಿ ಶ್ರೀನಿವಾಸ ಹೇಳುತ್ತಾರೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಸ ಸಂಗ್ರಹವಾಗುತ್ತಿದೆ. ಇದರಿಂದಾಗಿ ಹಂದಿಗಳು ಮತ್ತು ಬೀದಿನಾಯಿಗಳು ರಸ್ತೆ ಮಧ್ಯೆ ನಿಂತು ಸಾರ್ವಜನಿಕರ ಓಡಾಡಕ್ಕೆ ತೊಂದರೆ ಮಾಡುತ್ತಿವೆ. ಪುರಸಭೆ ವತಿಯಿಂದ ಈ ಕಸ ವಿಲೇಮಾರಿ ಹಾಗೂ ಚರಂಡಿ ಸ್ವಚ್ಛತೆ ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ’ ಎಂದು ಶಿವಪುರ ಬಡವಾಣೆಯ ನಿವಾಸಿ ಹೇಳಿದರು.
‘ಕಸ ವಿಲೇಮಾರಿ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಲಾದರೂ ಅಧಿಕಾರಿಗಳು ಪ್ರತಿ ಬಡಾವಣೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ವೀಕ್ಷಿಸಿ ತಕ್ಷಣ ಪರಿಹಾರ ನೀಡಬೇಕು’ ಎಂದು ನಿವಾಸಿ ಸುನೀಲ ಡಿ.ಎನ್ ಪತ್ರಿ ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.