ಗುರುವಾರ , ಅಕ್ಟೋಬರ್ 28, 2021
19 °C

ಸಿದ್ಧಾರ್ಥ ಬೌದ್ಧ ವಿಹಾರದಲ್ಲಿ ಬುದ್ಧನ ಮೂರ್ತಿ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಬ್ಯಾಂಕ್‌ ಕಾಲೊನಿಯ ಸಿದ್ಧಾರ್ಥ ಬೌದ್ಧ ವಿಹಾರದಲ್ಲಿ ಬುದ್ಧನ ಮೂರ್ತಿ ಸ್ಥಾಪನೆ ಕಾರ್ಯಕ್ರಮ ಭಾನುವಾರ ನಡೆಯಿತು.

ಭಿಕ್ಕು ಸಂಘಗಳ ನೇತೃತ್ವದಲ್ಲಿ ನಾಗಶೇನಾ ಬುದ್ಧ ವಿಹಾರದಿಂದ ಬ್ಯಾಂಕ್ ಕಾಲೊನಿಯ ಸಿದ್ದಾರ್ಥ ಬೌದ್ಧ ವಿಹಾರ ವರೆಗೆ ಎರಡು ಬುದ್ಧನ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು.

ಮಹಾಥೇರೊ ಧಮ್ಮಾನಂದ ಭಂತೆ ಸಾನ್ನಿಧ್ಯ ವಹಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಧಮ್ಮ ಕೀರ್ತಿ ಭಂತೆ, ಧಮ್ಮದೀಪ ಭಂತೆ, ರೇಕುಳಗಿಯ ಭೋದಿ ಧಮ್ಮ ಧಮ್ಮಪಾಲ ಭಂತೆ ಪ್ರವಚನ ನೀಡಿದರು.

ಸಂಘಜ್ಯೋತಿ ಭಂತೆ, ರಾಹುಲ್ ಭಂತೆ, ಜ್ಞಾನಸಾಗರ ಭಂತೆ, ಶೋಭಾ ರಾಜೇಶೇಖರ ಜಂಜೀರೆ, ಅಂಜನಾದೇವಿ ದರ್ಗಾ, ಜೈಯಶ್ರೀ ಮೇಟಿ, ರೂಪಾ ಉಜನಿಕರ್, ಪುಷ್ಪವತಿ ಕೊಟಾರೆ, ರೇಣುಕಾ ಹುಮನಾಬಾದೆ, ಪುನಿತಾ ಗಾಯಕವಾಡ, ಭಾಗ್ಯವತಿ ಸುನೀಲ ಅಮಲಾಪೂರಕರ್, ಮಲ್ಲಮ್ಮ ಬಾಬುರಾವ್ ಹೊಸಮನಿ ಅವರು ಬುದ್ಧನ ಕಂಚಿನ ಪ್ರತಿಮೆ ದಾನ ನೀಡಿದರು.

ಛಲವಾದಿ ಮಹಾಸಭಾದ ಅಧ್ಯಕ್ಷ ಪ್ರದೀಪ ಜಂಜಿರೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಡರು, ಗಣಪತರಾವ್ ಗಾಯಕವಾಡ, ಶಂಭುಸಾಗರ, ನಾಗನಾಥ ನಿಡೊದಕರ್, ವೀರಣ್ಣ ಚಂದನ್, ಗಣಪತಿ ದೀನೆ, ಭೀಮರಾವ್ ಸಂಗಮ್, ಕುಂದನ್ ಶಾಮರಾವ್, ಬಾಬುರಾವ್ ಹಸನ್‌ಕರ್, ಬಾಬುರಾವ್ ಹೊಸಮನಿ, ಪುಷ್ಪಾ, ಸವಿತ್ರಾಬಾಯಿ, ಪಷ್ಪಾವತಿ, ಕಮಲಾ ಪಾಲ್ಗೊಂಡಿದ್ದರು.

ಸಿದ್ದಾರ್ಥ ಬೌದ್ಧ ವಿಹಾರದ ಅಧ್ಯಕ್ಷ ಭೀಮಣ್ಣಾ ಭಾವಿಕಾಟ್ಟಿ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು