ಶನಿವಾರ, ಜೂಲೈ 4, 2020
22 °C
ಬ್ರಿಮ್ಸ್‌ನಲ್ಲಿ ಗುಣಮುಖರಾದ 10 ಜನ

ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ಜನರ ನಿದ್ದೆಗೆಡೆಸಿದ್ದ ಕೋವಿಡ್‌ 19 ಸೋಂಕಿತರ ಸಂಖ್ಯೆ ಜಿಲ್ಲಾಡಳಿತ ಸಕಾಲದಲ್ಲಿ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ ನಿಧಾನವಾಗಿ ಕುಸಿಯಲಾರಂಭಿಸಿದೆ. ಇದರೊಂದಿಗೆ ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ.

ಒಂದೂವರೆ ತಿಂಗಳಿಂದ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿವೆ. ಜಿಲ್ಲಾಧಿಕಾರಿ ಮಾರ್ಚ್ 17ರಂದು ಆದೇಶ ನೀಡಿದ ನಂತರ ನಗರದಲ್ಲಿನ 200 ಪಾನಿಪುರಿ, ಭೇಲ್‌ಪುರಿ, ಮಿರ್ಜಿಭಜಿ ಹಾಗೂ ಸುಸಲಾ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲಾಗಿತ್ತು. ಮಾರ್ಚ್ 18ರಂದು ಗಾಂಧಿ ಗಂಜ್‌ ಮಾರುಕಟ್ಟೆಯನ್ನು ಮಾಡಲಾಯಿತು. ನಂತರ ಹೋಟೆಲ್‌ ಹಾಗೂ ಲಾಡ್ಜ್‌ಗಳನ್ನೂ ಬಂದ್‌ ಮಾಡಲಾಯಿತು.

ಜಿಲ್ಲೆಯಲ್ಲಿ ಒಂದೇ ಬಾರಿಗೆ 8 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡು ಆಘಾತ ಮೂಡಿಸಿತ್ತು. ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲೂ ಸೋಂಕು ಕಾಣಿಸಿಕೊಂಡು ಸಂಖ್ಯೆ 15ಕ್ಕೆ ತಲುಪಿತ್ತು. ಜಿಲ್ಲಾಡಳಿತ ಎಲ್ಲರನ್ನೂ ಬ್ರಿಮ್ಸ್‌ ಆಸ್ಪತ್ರೆಯ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ಒದಗಿಸಿದೆ. ಇದಲ್ಲದೆ ನಿತ್ಯ 20 ಸಾವಿರದಿಂದ 30 ಸಾವಿರ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದೆ.

ಸೋಂಕಿತರ ಮೊದಲ ಸಂಪರ್ಕಕ್ಕೆ 578 ಹಾಗೂ ಎರಡನೇ ಸಂಪರ್ಕಕ್ಕೆ 1,868 ಜನ ಬಂದಿದ್ದಾರೆ. ಈವರೆಗೆ 2,935 ಜನರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆ ನಡೆಸಲಾಗಿದೆ. 2,582 ಜನರ ವರದಿ ನೆಗೆಟಿವ್ ಹಾಗೂ 15 ಜನರ ಪಾಸಿಟ್‌ ಬಂದಿದೆ. 15 ಜನರ ಪೈಕಿ 11 ಗುಣಮುಖರಾಗಿದ್ದಾರೆ. ನಾಲ್ವರು ಮಾತ್ರ ಬಿಮ್ಸ್‌ನಲ್ಲಿ ವಿಶೇಷ ನಿಗಾ ಘಟಕದಲ್ಲಿ ಇದ್ದಾರೆ.

ಕಲಬುರ್ಗಿಯಿಂದ ಇನ್ನೂ 370 ಜನರ ವರದಿ ಬರಬೇಕಿದೆ. 4,789 ಜನರನ್ನು ಮನೆಯಲ್ಲೇ ನಿಗಾದಲ್ಲಿ ಇರಿಸಲಾಗಿದೆ. ಓಲ್ಡ್‌ಸಿಟಿಯ 100 ಹಾಸಿಗೆಗಳ ತಾಯಿ ಹಾಗೂ ಮಕ್ಕಳ ಆಸ್ಪತ್ರೆ, ವಿದ್ಯಾರ್ಥಿ ವಸತಿ ನಿಲಯಗಳಲ್ಲೂ ಕೆಲವರನ್ನು ಇಡಲಾಗಿದೆ.

ಸೋಂಕು ಹರಡುವಿಕೆ ತಡೆಗಟ್ಟುವ ದಿಸೆಯಲ್ಲಿ ಪೊಲೀಸರು ಸಹ ಒಂದೂವರೆ ತಿಂಗಳಿಂದ ನಿರಂತರವಾಗಿ ಬಂದೋಬಸ್ತ್‌ನಲ್ಲಿ ತೊಡಗಿದ್ದಾರೆ. ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಹಗಲು ರಾತ್ರಿ ಎನ್ನದೆ ಜಿಲ್ಲೆಯೊಳಗೆ ಬರುವವರು ಹಾಗೂ ಹೋಗುವವರ ಮೇಲೆ ನಿಗಾ ಇಟ್ಟಿದ್ದಾರೆ. ಇದರಿಂದಾಗಿ ಜನರ ಚಲನವಲನ ಕಡಿಮೆಯಾಗಿ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಸಹಜವಾಗಿಯೇ ಸೋಂಕಿತರ ಸಂಖ್ಯೆಯೂ ಕಡಿಮೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು