ಔರಾದ್ ಹಾಗೂ ಕಮಲನಗರ ತಾಲ್ಲೂಕು ಸೇರಿ ಕ್ಷೇತ್ರದಲ್ಲಿ ಒಂದೇ ಡಯಾಲಿಸಿಸ್ ಘಟಕ ಇದೆ. ಸದ್ಯ ಇಲ್ಲಿ 9 ಡಯಾಲಿಸಿಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಎಂಟು ರೋಗಿಗಳು ಹೆಸರು ನೋಂದಾಯಿಸಿದ್ದಾರೆ. ಹೀಗಾಗಿ ಇಲ್ಲಿ ಎರಡು ಹೊಸ ಡಯಾಲಿಸಿಸ್ ಯಂತ್ರಗಳ ಅಗತ್ಯವಿದೆ. ಈ ಬಗ್ಗೆ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಡಾ.ಗಾಯತ್ರಿ ತಾಲ್ಲೂಕು ಆರೋಗ್ಯಾಧಿಕಾರಿ ಔರಾದ್
ಶಾಮದಮಿಯ್ಯಾ
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ನನಗೆ ನನ್ನ ಊರಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪ್ರತಿ ವಾರ ಬೀದರ್ ಹೋಗಿ ಬಂದು ಸಾಕಾಗಿದೆ.
ಶಾಮದಮಿಯ್ಯಾ ಔರಾದ್ ಪಟ್ಟಣ ನಿವಾಸಿ
ನಮ್ಮ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಪ್ರಭು ಚವಾಣ್ ಅವರು ತಾಲ್ಲೂಕಿನ ಆಸ್ಪತ್ರೆಗೆ ಎರಡು ಗುಣಮಟ್ಟದ ಡಯಾಲಿಸಿಸ್ ಯಂತ್ರ ಕೊಡಿಸಿ ನಮ್ಮಂತಹ ರೋಗಿಗಳ ನೆರವಿಗೆ ಬರಬೇಕು.