ಬುಧವಾರ, ಜೂನ್ 23, 2021
29 °C
ಮತ್ತೆ 50 ಮಂದಿಗೆ ಕೋವಿಡ್ ವೈರಾಣು

ಸೋಂಕಿನಿಂದ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಸೋಮವಾರ 50 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಈಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದ ಒಬ್ಬ ಮಹಿಳೆ ಸೇರಿ ಮೂವರಿಗೆ ಸೋಂಕು ತಗುಲಿದ್ದು, ದೃಢಪಟ್ಟಿದೆ.

ಜಿಲ್ಲೆಯ 72 ವರ್ಷದ ಮಹಿಳೆ ಉಸಿರಾಟ ತೊಂದರೆಯಿಂದ ಜುಲೈ 23 ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 3 ರಂದು ಕೊನೆಯುಸಿರೆಳೆದಿದ್ದರು. ಜುಲೈ 31ರಂದು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 66 ಹಾಗೂ 86 ವರ್ಷದ ಇಬ್ಬರು ಪುರುಷರು ಆಗಸ್ಟ್‌ 8 ರಂದು ಮೃತಪಟ್ಟಿದ್ದರು.

ಮೂವರು ವ್ಯಕ್ತಿಗಳ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಸೋಮವಾರ ವರದಿ ಪಾಸಿಟಿವ್‌ ಬಂದಿದೆ.

ಜಿಲ್ಲೆಯಲ್ಲಿ ಕೋವಿಡ್ ವೈರಾಣು ಪೀಡಿತರ ಸಂಖ್ಯೆ 2,448ಕ್ಕೆ ತಲುಪಿದೆ. 692 ಕೋವಿಡ್‌ ಪ್ರಕರಣಗಳು ಸಕ್ರೀಯವಾಗಿವೆ. ಕೋವಿಡ್ ಆಸ್ಪತ್ರೆಯಿಂದ 90 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 1,670 ಮಂದಿ ಬಿಡುಗಡೆ ಹೊಂದಿದ್ದಾರೆ.

ಹುಮನಾಬಾದ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 28 ಸೋಂಕಿತರು ಪತ್ತೆಯಾಗಿದ್ದಾರೆ. ಹುಮನಾಬಾದ್‌ ತಾಲ್ಲೂಕಿನ ಹುಡಗಿ ಗ್ರಾಮದ 50. 18. 48. 40. 11 .15. 38. 39 ಹಾಗೂ 19 ವರ್ಷದ ಪುರುಷ.ಮತ್ತು 35. 15. 14. 70. 13. 12. 65. 36 ವರ್ಷದ ಮಾಹಿಳೆಯರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಹಳ್ಳಿಖೇಡ(ಬಿ) ಪಟ್ಟಣದ 52. 90. ವರ್ಷದ ಮಹಿಳೆ ಮತ್ತು 30 ವರ್ಷದ ಪುರುಷನಿಗೆ ಕೋವಿಡ್ ಸೋಂಕು ತಗುಲಿದೆ

ಬೀದರ್ ತಾಲ್ಲೂಕಿನಲ್ಲಿ 11 ಮಂದಿಗೆ, ಭಾಲ್ಕಿ ತಾಲ್ಲೂಕಿನಲ್ಲಿ ಇಬ್ಬರು, ಔರಾದ್ ತಾಲ್ಲೂಕಿನಲ್ಲಿ 6, ಬಸವಕಲ್ಯಾಣ ತಾಲ್ಲೂಕಿನಲ್ಲಿ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು