ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಗೆ ಕಿರುಕುಳ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

Published 23 ಏಪ್ರಿಲ್ 2024, 4:43 IST
Last Updated 23 ಏಪ್ರಿಲ್ 2024, 4:43 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಮುಸ್ಲಿಂ ಸಮುದಾಯದ ಯುವಕರು ತಮ್ಮದೇ ಸಮುದಾಯದ ಯುವತಿಗೆ ವಿವಿಧ ರೀತಿಯ ಕಿರುಕುಳ ನೀಡಿದ್ದರಿಂದ ಯುವತಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಗೌರ ಗ್ರಾಮದಲ್ಲಿ ನಡೆದಿದೆ.

‘ಗೌರ ಗ್ರಾಮದಿಂದ ಪ್ರತಿದಿನ ಬಸವಕಲ್ಯಾಣ ನಗರಕ್ಕೆ ಟೈಲರಿಂಗ್‌ ಕೆಲಸಕ್ಕಾಗಿ ಹೋಗಿ ಬರುತ್ತಿದ್ದ ಯುವತಿಗೆ, ಯುವಕರು ದಿನಾಲೂ ಪೀಡಿಸುತ್ತಿದ್ದರು. ಏ.17ರಂದು ಆಕೆಯನ್ನು ಅಟೊದಲ್ಲಿ ಕೂರಿಸಿಕೊಂಡು ಗೌರ ಗ್ರಾಮಕ್ಕೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯದಲ್ಲಿ ಆಕೆಗೆ ಮೊಬೈಲ್ ಸಂಖ್ಯೆ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ. ಏ.18ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮೈಮೇಲೆ ಸೀಮೆ ಎಣ್ಣೆ‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ನೋವು ತಾಳಲಾರದೆ ಬೆಂಕಿ ಆರಿಸಿಕೊಂಡಿದ್ದಾಳೆ. ಗಾಯಗೊಂಡ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಅಜ್ಜಿ ನೀಡಿದ ದೂರಿನ ಮೇರೆಗೆ ಹುಲಸೂರ ಠಾಣೆಯಲ್ಲಿ ಏ.21ರಂದು ಪ್ರಕರಣ ದಾಖಲಾಗಿದೆ. ಖದೀರ್, ಬಿಲಾಲ್, ತೌಸೀಫ್, ಮುಜಾಫರ್, ಗೌಸ್ ಒಳಗೊಂಡು 10ರಿಂದ 15 ಜನರು ನನ್ನ ಮೊಮ್ಮಗಳಿಗೆ ಚುಡಾಯಿಸಿದ್ದರಿಂದ ಅವಮಾನ ತಾಳದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT