ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಸಾಹಿತಿ ಸಿದ್ದಲಿಂಗಯ್ಯಗೆ ಶ್ರದ್ಧಾಂಜಲಿ

Last Updated 12 ಜೂನ್ 2021, 14:58 IST
ಅಕ್ಷರ ಗಾತ್ರ

ಬೀದರ್: ವಿವಿಧ ಸಂಘಟನೆಗಳ ವತಿಯಿಂದ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎರಡು ನಿಮಿಷಗಳ ಮೌನ ಆಚರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು, ಸಿದ್ದಲಿಂಗಯ್ಯ ಅವರ ಜೀವನ, ಸಾಹಿತ್ಯ ಹಾಗೂ ಸಾಧನೆ ಮೇಲೆ ಬೆಳಕು ಚೆಲ್ಲಿದರು. ಸಿದ್ದಲಿಂಗಯ್ಯ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು. ಹೋರಾಟಗಾರರ ಬೆನ್ನೆಲುಬು ಆಗಿದ್ದರು ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ನೇತೃತ್ವ ವಹಿಸಿದ್ದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಮುಖಂಡರಾದ ನಾಗೇಂದ್ರ ದಂಡೆ, ಬಾಬುರಾವ್ ವಡ್ಡೆ, ನಾಗಲಿಂಗ ಕವಿ, ಅನಿಲಕುಮಾರ ಬೆಲ್ದಾರ್, ಪಾರ್ವತಿ ಸೋನಾರೆ, ಓಂಪ್ರಕಾಶ ದಡ್ಡೆ, ರೇವಣಸಿದ್ದಪ್ಪ ಜಲಾದೆ, ಗಂಧರ್ವ ಸೇನಾ, ಸುಮಂತ ಕಟ್ಟಿಮನಿ, ಎಂ.ಪಿ. ಮುದಾಳೆ, ಸುಬ್ಬಣ್ಣ ಕರಕನಳ್ಳಿ, ಅಂಬಾದಾಸ ಗಾಯಕವಾಡ, ಗೌತಮ ಭೋಸ್ಲೆ, ಮಲ್ಲಿಕಾರ್ಜುನ ಮೋಳಕೆರೆ, ಮಾರುತಿ ಬಿ. ಕಂಟೆ, ದಿಲೀಪ್ ಭೋಸ್ಲೆ, ವಿಜಯಕುಮಾರ ಸೋನಾರೆ, ಓಂಪ್ರಕಾಶ ರೊಟ್ಟೆ, ಯೇಸುದಾಸ ಅಲಿಯಂಬರ್, ಶಿವಕುಮಾರ ಗುನ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT