ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ವಿಚಾರಧಾರೆ ವೈವಿಧ್ಯಮಯ

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿಮತ
Last Updated 31 ಅಕ್ಟೋಬರ್ 2020, 14:07 IST
ಅಕ್ಷರ ಗಾತ್ರ

ಬೀದರ್: ವಾಲ್ಮೀಕಿ ಅವರ ಲೋಕದೃಷ್ಟಿ ಮತ್ತು ವಿಚಾರಧಾರೆಗಳು ವಿಶಾಲ ಹಾಗೂ ವೈವಿಧ್ಯಮಯವಾಗಿವೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ವಾಲ್ಮೀಕಿ ಭಾರತದ ಆದಿಕವಿ ಎಂದೇ ಹೆಸರಾಗಿದ್ದಾರೆ. ಬಹುತೇಕ ಭಾರತೀಯರು ಅವರು ರಚಿಸಿದ ರಾಮಾಯಣದ ಅಧ್ಯಯನ ಮಾಡಿದ್ದಾರೆ. ರಾಮಾಯಣ ರಚನೆಯಲ್ಲಿ ವಾಲ್ಮೀಕಿಯವರು ತೋರಿದ ಮಾರ್ಗ, ದೃಷ್ಟಿಕೋನ, ವೈಚಾರಿಕ ನೆಲೆಗಟ್ಟು ವಿಶಿಷ್ಟವಾಗಿದೆ ಎಂದರು.

ವಾಲ್ಮೀಕಿ ಅವರ ಲೋಕದೃಷ್ಟಿ, ವಿಚಾರಧಾರೆ, ಪ್ರತಿಭೆ, ಚರಿತ್ರೆ, ಸಂಸ್ಕøತಿ, ರಾಜನೀತಿ ಮೊದಲಾದ ಸಂಗತಿಗಳ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ. ವಾಲ್ಮೀಕಿ ಒಬ್ಬರು ಭಾರತೀಯರಾಗಿ ಚಿಂತಿಸಿರುವುದನ್ನು ಲೋಕದೃಷ್ಟಿಯೆಂದು ಮತ್ತು ಅವರು ದಾರ್ಶನಿಕ ಮತ್ತು ತತ್ವಜ್ಞಾನಿಯಾಗಿ ಚಿಂತಿಸಿರುವುದನ್ನು ವಿಚಾರಧಾರೆ ಎಂದು ಕರೆಯಬಹುದಾಗಿದೆ ಎಂದು ತಿಳಿಸಿದರು.

ಭಾರತದ ಚರಿತ್ರೆ ಮತ್ತು ಸಂಸ್ಕøತಿ ನೆಲೆಗಿಂತ, ಮೌಖಿಕ ಪರಂಪರೆ ಹಾಗೂ ವಾಲ್ಮೀಕಿ ಬರೆದ ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡು ಅನೇಕ ರಾಮಾಯಣಗಳು ಸೃಷ್ಟಿಯಾಗಿವೆ. ಲೋಕದೃಷ್ಟಿ ಮತ್ತು ವಿಚಾರಧಾರೆ ಹಿನ್ನೆಲೆಯ ಕಾರಣ ವಾಲ್ಮೀಕಿ ರಾಮಾಯಣವನ್ನು ಹೊಸಪೀಳಿಗೆಗೆ ಅರ್ಥೈಸುವ ಪ್ರಯತ್ನವಾಗಬೇಕಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸರೋಜಾ, ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ್, ಯುವ ಘಟಕದ ಅಧ್ಯಕ್ಷ ಸುನೀಲ್ ಭಾವಿಕಟ್ಟಿ, ಮುಖಂಡರಾದ ಶರಣಪ್ಪ ಕಾಶೆಂಪೂರ್, ಷಣ್ಮುಕಪ್ಪ ಶೇಕಾಪೂರ, ರವೀಂದ್ರ ಗುಮಾಸ್ತಿ, ಮಾರುತಿ ಮಾಸ್ಟರ್, ಸಂತೋಷ ಹೊನ್ನಡ್ಡಿ, ಸಂಜೀವಕುಮಾರ ಅಲಿಯಂಬರ್, ಸರಸ್ವತಿ ಜಮಾದಾರ್, ರಾಜಕುಮಾರ ಜಮಾದಾರ್, ಮಹೇಶ ಕೋಲಿ, ಸೂರ್ಯಕಾಂತ ಬರಿದಾಬಾದ್, ಅನೀಲ್ ಅಣದೂರ, ಪ್ರಭು ಮರ್ಜಾಪೂರ ಇದ್ದರು.

ಬಿಜೆಪಿ ಕಚೇರಿ:ಬಿಜೆಪಿ ಎಸ್.ಟಿ. ಮೋರ್ಚಾದ ವತಿಯಿಂದ ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಭಗವಂತ ಖೂಬಾ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಎಸ್.ಟಿ.ಮೋರ್ಚಾ ನಗರ ಘಟಕದ ಅಧ್ಯಕ್ಷ ರಮೇಶ ಬಿರಾದಾರ, ಎಸ್.ಟಿ. ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಪಾಲಂ, ರಾಜಕುಮಾರ ಚಿದ್ರಿ, ಪ್ರಸನ್ನ ಲಕ್ಷ್ಮಿ ದೇಶಪಾಂಡೆ, ಅನಿಲ ರಾಜಗಿರಾ, ಸುನೀಲ ಗೌಳಿ, ಗುಂಡಪ್ಪ ಬುಧೇರಾ, ಅವಿನಾಶ ಬರಿದಾಬಾದೆ, ರಾಜಕುಮಾರ ಜಮಾದಾರ, ದೀಪಕ ಚಿದ್ರಿ, ಗುರುನಾಥ ಜಾಂತಿಕರ್ ಇದ್ದರು. ಪಕ್ಷದ ಕಲಬುರ್ಗಿ ವಿಭಾಗದ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಣದೂರ್:ಬೀದರ್‌ ತಾಲ್ಲೂಕಿನ ಅಣದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಚಿನ್ನಮ್ಮ ಪೂಜೆ ಸಲ್ಲಿಸಿದರು, ಮುಖ್ಯ ಅತಿಥಿಯಾಗಿ ಚೇತನ ಸೋರಳ್ಳಿ. ಬಾಬುರಾವ್ ಪಸರ್ಗೆ, ಶಿವಕುಮಾರ ಬಗ್ಗಾ, ಶಿಕ್ಷಕರಾದ ರಾಘವೇಂದ್ರ, ಸಿವಿಲ್ ರಾಣಿ ಇದ್ದರು.

ಮಹಿಳಾ ಪದವಿ ಮಹಾವಿದ್ಯಾಲಯ:ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಉಪಾನ್ಯಾಸಕಿ ರಾಜಮ್ಮ ಸಂಗಮೇಶ ನೇಳಗೆ ಪೂಜೆ ನೆರವೇರಿಸಿದರು. ಉಪನ್ಯಾಸಕರಾದ ಈಶ್ವರ ರೆಡ್ಡಿ, ನಾಗಪ್ಪ ಜಾನಕನೊರ, ಅಂಜಮ್ಮ ಕೋಟೆ ಹಾಗೂ ಮಾರುತಿ ಪಂಚಾಳ್ ಇದ್ದರು.

ವಾಲ್ಮೀಕಿ ಭವನದ ಕಟ್ಟಡ ಕಾಮಗಾರಿ ಆರಂಭಿಸಿ

ಬೀದರ್: ನಗರದಲ್ಲಿ ನನೆಗುದಿಗೆ ಬಿದ್ದಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಪದಾಧಿಕಾರಿಗಳು ಸಮಾಜ ಕಲ್ಯಾಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಶನಿವಾರ ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 2010-2011ರಲ್ಲಿ ₹ 1 ಕೋಟಿ ಮಂಜೂರು ಮಾಡಲಾಗಿದೆ. ಮೊದಲ ಕಂತಾಗಿ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ. ಒಂಬತ್ತು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ಚಿಕ್ಕಪೇಟನಲ್ಲಿರುವ ಬಂಜಾರಾ ಸಮಾಜ ಭವನದ ಪಕ್ಕದಲ್ಲೇ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ 20 ಗುಂಟೆ ಭೂಮಿ ನೀಡಲಾಗಿದೆ. ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ಗುದ್ದಲಿ ಪೂಜೆ ಸಹ ನೆರವೇರಿಸಿದ್ದಾರೆ. ಕಾಮಗಾರಿ ಆರಂಭಕ್ಕೆ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ್ ಹಾಗೂ ಯುವ ಘಟಕದ ಅಧ್ಯಕ್ಷ ಸುನೀಲ ಭಾವಿಕಟ್ಟಿ ಹೇಳಿದರು. ಈ ಸಂದರ್ಭದಲ್ಲಿ ಮಾರುತಿ ಮಾಸ್ಟರ್, ಶರಣಪ್ಪ ಕಾಶೆಂಪೂರ್, ಷನ್ಮುಖಪ್ಪ ಶೇಕಾಪುರ, ರವೀಂದ್ರ ಗುಮಾಸ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT