ಸೋಮವಾರ, ಡಿಸೆಂಬರ್ 9, 2019
25 °C

‘ಸೌಲಭ್ಯಗಳು ಅರ್ಹರನ್ನು ತಲುಪಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ‘ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು’ ಎಂದು ಶಿಕ್ಷಕ ಆಕಾಶ ಜಾಧವ ಹೇಳಿದರು.

ತಾಲ್ಲೂಕಿನ ಶಿವಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾವಿರಾರು ಮಂದಿ ಅಂಗವಿಕಲರು ಇದ್ದಾರೆ. ಮೂರು ಅಥವಾ ಆರು ತಿಂಗಳಿಗೊಮ್ಮೆ ಇಲಾಖೆ ಅಧಿಕಾರಿಗಳು ಅವರ ಬಳಿ ತೆರಳಿ ಸರ್ಕಾರದ ಸೌಲಭ್ಯಗಳು ತಲುಪುತ್ತಿದೆಯೇ ಎಂದು ಮೇಲ್ವಿಚಾರಣೆ ನಡೆಸಬೇಕು. ಆ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕುವಂತೆ ಮಾಡಬೇಕು ಎಂದರು.

ಶಿಕ್ಷಕಿ ಶಾಂತಾಬಾಯಿ ಗಾಯಕವಾಡ, ವನಮಾಲಾ, ಚಂಪಾಬಾಯಿ ಬಿರಾದಾರ, ಉತ್ತಮಬಾಯಿ ವಿಲಾಸಪುರೆ ಹಾಗೂ ಶಾಲೆಯ ಮಕ್ಕಳು ಇದ್ದರು.

ಪ್ರತಿಕ್ರಿಯಿಸಿ (+)