ಭಾಲ್ಕಿ: ತಾಲ್ಲೂಕಿನ ಎಲ್ಲೆಡೆ ಶಾಂತಿ, ಕಾನೂನು ಸುವ್ಯವಸ್ಥೆ ನೆಲೆಸಲು ಮತ್ತು ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳಲು ಜನರು ಜೆಡಿಎಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರಕಾಶ ಖಂಡ್ರೆ ನುಡಿದರು.

ತಾಲ್ಲೂಕಿನ ಚಳಕಾಪೂರ, ಕಟ್ಟಿತೂಗಾಂವ ಗ್ರಾಮದಲ್ಲಿ ಶುಕ್ರವಾರ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ 10 ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಯಾವುದೇ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ ಎಂದು ದೂರಿದರು.

ಬಿಜೆಪಿ ಅಭ್ಯರ್ಥಿ ಡಿ.ಕೆ. ಸಿದ್ರಾಮ ಅವರಿಗೆ ಯಾವುದೇ ಖಚಿತ ನಿಲುವು ಇಲ್ಲ ಎಂದು ವ್ಯಂಗ್ಯವಾಡಿದರು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಂಜಯ ಖೇಣಿ ಮಾತನಾಡಿ, ರೈತರ ಕಷ್ಟಗಳಿಗೆ ಸದಾ ಸ್ಪಂದಿಸುತ್ತ ಬಂದಿರುವ ಪ್ರಕಾಶ ಖಂಡ್ರೆ ಅವರಿಗೆ ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸುಭಾಷ ಪಾಟೀಲ, ವೀರಣ್ಣಾ ಕಾರಬಾರಿ, ಪ್ರಕಾಶ ಮಾಶೆಟ್ಟೆ, ಕೈಲಾಸನಾಥ ಪಾಟೀಲ, ಕಪಿಲ್ ಗೋಡಬೊಲೆ, ಅಮರ್ ಬಶೆಟ್ಟಿ, ಬಾಬುರಾವ್ ಪಾಟೀಲ ಮಾಸಿಮಾಡ, ವಿಶ್ವನಾಥ ಮಾನಕೋಜಿ, ಹಣಮಂತ ಪಾಟೀಲ, ಭೀಮರಾವ್ ಚಿಕ್ಕಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.