ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದಾಳರಿಗೆ ಕಸಾಪ ಆಮಂತ್ರಣ

Last Updated 1 ಜೂನ್ 2013, 10:04 IST
ಅಕ್ಷರ ಗಾತ್ರ

ಜೇವರ್ಗಿ: ಜೂನ್ 15 ಮತ್ತು 16 ರಂದು ಗುಲ್ಬರ್ಗದ ಕನ್ನಡಸಂಘದಲ್ಲಿ ನಡೆಯುವ 13 ನೇ ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ರಂಗಕರ್ಮಿ, ಸಾಹಿತಿ  ಎಲ್.ಬಿ.ಕೆ.ಆಲ್ದಾಳ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಫಲಪುಷ್ಪ ನೀಡಿ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, `ಜೂ.15,16ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆಲ್ದಾಳ್ ಅವರ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ಉದ್ದೇಶ ಕಸಾಪ ಹೊಂದಿದೆ' ಎಂದು ತಿಳಿಸಿದರು.

ಅಧಿಕೃತ ಆಮಂತ್ರಣ ಸ್ವೀಕರಿಸಿದ ಸಾಹಿತಿ ಆಲ್ದಾಳ ಅವರು, `ನಾನು ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಲಿಲ್ಲ. ನನ್ನಂಥ ಗ್ರಾಮೀಣ ಪ್ರದೇಶದ ಸಾಹಿತಿಗಳನ್ನು ಗುರುತಿಸಿ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕಸಾಪ ಪದಾಧಿಕಾರಿಗಳ ಔದಾರ್ಯದ ನಡವಳಿಕೆ' ಎಂದು ವಿನಯದಿಂದ ಹೇಳಿದರು.

ಡಾ.ರಾಜೇಂದ್ರ ಯರನಾಳೆ, ಸುರೇಶ ಬಡಿಗೇರ, ಬಿ.ಎಚ್.ನಿರಗುಡಿ, ಸಂಧ್ಯಾ ಹೊನಗುಂಟಿಕರ್, ಶಿವಶಾಂತರಡ್ಡಿ ಪಾಟೀಲ, ಜಿ.ಎಸ್.ಮಾಲಿ ಪಾಟೀಲ, ತಾಲ್ಲೂಕ ಕಸಾಪ ಅಧ್ಯಕ್ಷ ಶಿವಕವಿ ಹಿರೇಮಠ ಜೋಗೂರ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT