ರಾಮನಗರ: ಜಿ.ಪಂ. ಎದುರು ಬಿಜೆಪಿ ಪ್ರತಿಭಟನೆ

7
ಕೇಂದ್ರ ಸರ್ಕಾರದ ಯೋಜನೆಗಳ ನಿರ್ಲಕ್ಷ್ಯ ಆರೋಪ

ರಾಮನಗರ: ಜಿ.ಪಂ. ಎದುರು ಬಿಜೆಪಿ ಪ್ರತಿಭಟನೆ

Published:
Updated:
Deccan Herald

ರಾಮನಗರ: ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಗಳು ನಿರ್ಲಕ್ಷ್ಯ ತೋರಿವೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

‘ಇದೇ ತಿಂಗಳ 1ರಂದು ಜಿ.ಪಂ. ಭವನದಲ್ಲಿ ಅಂಚೆ ಇಲಾಖೆಯ ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಉದ್ಘಾಟನಾ ಕಾರ್ಯಕ್ರಮವು ನಡೆದಿತ್ತು. ಅದರಲ್ಲಿ ಜಿ.ಪಂ. ಸಿಇಒ, ಎಸ್ಪಿ ಹೊರತುಪಡಿಸಿ ಯಾವ ಹಿರಿಯ ಅಧಿಕಾರಿಗಳೂ, ಜನಪ್ರತಿನಿಧಿಗಳೂ ಪಾಲ್ಗೊಳ್ಳಲಿಲ್ಲ. ಸಿಇಒ ಮುಲ್ಲೈ ಮುಹಿಲನ್‌ ಕಾರ್ಯಕ್ರಮದ ಅರ್ಧಕ್ಕೆ ಎದ್ದು ನಡೆದಿದ್ದರು. ಇದನ್ನು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರಿಗೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದರು’ ಎಂದು ಆರೋಪಿಸಿದರು.

‘ಜಿ.ಪಂ. ಹಾಗೂ ಜಿಲ್ಲಾಡಳಿತಗಳು ಈ ಹಿಂದೆಯೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಚಾರದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿವೆ. ಇದರಿಂದ ಈ ಯೋಜನೆಗಳು ಸಕಾಲಕ್ಕೆ ಫಲಾನುಭವಿಗಳನ್ನು ತಲುಪುತ್ತಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಈ ಕುರಿತು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು. ಬಿಜೆಪಿ ಮುಖಂಡರಾದ ಎಸ್‌.ಆರ್. ನಾಗರಾಜು, ಮುರಳೀಧರ್, ಪ್ರವೀಣ್‌ ಗೌಡ, ಪದ್ಮನಾಭ, ಮಂಜುನಾಥ್. ಚಂದ್ರಶೇಖರ ರೆಡ್ಡಿ, ರಮೇಶ್‌, ವಿ. ರಾಜು, ಚಂದ್ರಪ್ರಭಾ, ಗಾಯತ್ರಮ್ಮ, ಹೇಮಾವತಿ, ಸಾವಿತ್ರಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !