ಮದ್ಯದ ನಶೆಯಲ್ಲಿ ಮರ್ಮಾಂಗಕ್ಕೆ ಬ್ಲೇಡ್‌..!

7

ಮದ್ಯದ ನಶೆಯಲ್ಲಿ ಮರ್ಮಾಂಗಕ್ಕೆ ಬ್ಲೇಡ್‌..!

Published:
Updated:

ಬಸವನಬಾಗೇವಾಡಿ (ವಿಜಯಪುರ): ತಾಲ್ಲೂಕಿನ ಇವಣಗಿ ಗ್ರಾಮದ ಮದ್ಯ ವ್ಯಸನಿಯೊಬ್ಬ ಶನಿವಾರ ರಾತ್ರಿ, ನಶೆಯಲ್ಲಿ ತನ್ನ ಮರ್ಮಾಂಗ ಹಾಗೂ ಅದರ ಕೆಳಭಾಗಕ್ಕೆ ಬ್ಲೇಡ್‌ನಿಂದ ಕೊಯ್ದುಕೊಂಡು ಗಂಭೀರ ಗಾಯಗೊಂಡಿದ್ದಾರೆ.

ಇವಣಗಿಯ ರಾಜು ಶರಣಪ್ಪ ಗೊಳಸಂಗಿ (ಕುಂಬಾರ, 42) ಗಂಭೀರ ಗಾಯಗೊಂಡವ. ಭಾನುವಾರ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಈತ ಮೂರ್ನಾಲ್ಕು ದಿನದಿಂದ ಸತತವಾಗಿ ಮದ್ಯ ಸೇವಿಸಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಇದರ ಜತೆಗೆ ಕೌಟುಂಬಿಕ ಕಲಹದಿಂದ ನೊಂದಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎಂದು ಬಸವನಬಾಗೇವಾಡಿ ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !