ರಾಮನಗರ ಉಪಚುನಾವಣೆ: ಬಿಜೆಪಿ ಪ್ರಚಾರ ಆರಂಭ, ಶನಿವಾರ ಅಭ್ಯರ್ಥಿ ಹೆಸರು ಘೋಷಣೆ

6

ರಾಮನಗರ ಉಪಚುನಾವಣೆ: ಬಿಜೆಪಿ ಪ್ರಚಾರ ಆರಂಭ, ಶನಿವಾರ ಅಭ್ಯರ್ಥಿ ಹೆಸರು ಘೋಷಣೆ

Published:
Updated:
Deccan Herald

ರಾಮನಗರ: ಇಲ್ಲಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಬಿಜೆಪಿಯು ಉಪ ಚುನಾವಣೆಗೆ ಶುಕ್ರವಾರ ಪ್ರಚಾರ ಆರಂಭಿಸಿತು.

ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಹಾಗೂ ಎಲ್. ಚಂದ್ರಶೇಖರ್ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು. ಈ ಸಂದರ್ಭ ಮಾತನಾಡಿದ ಚಂದ್ರಶೇಖರ್ ‘ನಾವು ಮೊದಲಿನಿಂದಲೂ ಜೆಡಿಎಸ್ ವಿರೋಧಿಯಾಗಿದ್ದೇವೆ. ಆ ಪಕ್ಷದ ಅಭ್ಯರ್ಥಿಯನ್ನು ಸೋಲಿಸುತ್ತೇವೆ. ನನಗೆ ಟಿಕೆಟ್‌ ದೊರೆಯದೆ ಬೇರೆಯವರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತೇವೆ’ ಎಂದು ತಿಳಿಸಿದರು.

‘ಬಿಜೆಪಿಗೆ ಸೇರಿರುವುದು ತುಂಬಾ ಸಂತೋಷವಾಗಿದೆ. ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣವಿದೆ. ಮನೆಯಲ್ಲಿಯೂ ಉತ್ತಮ ವಾತಾವರಣವಿದೆ. ತಾಯಿ ಆಶೀರ್ವಾದ ಈಗಾಗಲೇ ಸಿಕ್ಕಿದೆ. ಮುಂದಿನ ದಿನಗಳಲ್ಲಿ ತಂದೆಯ ಆಶೀರ್ವಾದವೂ ದೊರೆಯುತ್ತದೆ. ಅವರ ಹೆಸರಿಗೆ ಕಳಂಕ ತರುವಂತಹ ಯಾವುದೇ ರೀತಿಯ ಕೆಲಸವನ್ನು ನಾನು ಮಾಡುವುದಿಲ್ಲ’ ಎಂದರು.

‘ಪಕ್ಷದಲ್ಲಿ ಹಳೆಯ ಕಾರ್ಯಕರ್ತರು, ಹೊಸ ಕಾರ್ಯಕರ್ತರು ಎಂಬುದಿಲ್ಲ. ಇಲ್ಲಿ ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡಲಾಗುತ್ತಿದೆ’ ಎಂದರು.

ಎಂ. ರುದ್ರೇಶ್ ಮಾತನಾಡಿ ‘ನವರಾತ್ರಿಯ ಶುಕ್ರವಾರ ಶುಭ ದಿನವಾಗಿದೆ. ಆದ್ದರಿಂದ ಪ್ರಚಾರ ಪ್ರಾರಂಭಿಸಿದ್ದೇವೆ. ಜತೆಗೆ ಕಾಂಗ್ರೆಸ್ ಮುಖಂಡರ ಮನೆಗೆ ತೆರಳಿ ಅವರ ಮನವೊಲಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಪಕ್ಷದ ಮುಖಂಡರಾದ ಎಸ್.ಆರ್. ನಾಗರಾಜ್, ಶಿವಮಾದು, ರಾಜು, ರಮೇಶ್, ಮುರುಳೀಧರ್, ಶಿವಸ್ವಾಮಿ ಮಾದಾಪುರ, ಪ್ರವೀಣ್‌ ಗೌಡ, ಶಿವಲಿಂಗಯ್ಯ, ಮಂಜು, ವರದರಾಜು ಇದ್ದರು.

* ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಶನಿವಾರ ಅಭ್ಯರ್ಥಿ ಹೆಸರು ಘೋಷಿಸಲಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಲಿದ್ದೇವೆ
-ಎಂ. ರುದ್ರೇಶ್, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !