ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಳಿತಾಯ ಮನೋಭಾವ ಬೆಳೆಸಿಕೊಳ್ಳಿ’

Last Updated 19 ಡಿಸೆಂಬರ್ 2013, 6:34 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸ್ವಸಹಾಯ ಸಂಘದ ಸದಸ್ಯರು ಉಳಿತಾಯ ಮನೋ­ಭಾವ ಬೆಳೆಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ಜತೆಗೆ, ತಮ್ಮ ಗ್ರಾಮಗಳ ಅಭಿವೃದ್ಧಿಗೂ ಗಮನ­ಹರಿಸಬೇಕು’ ಎಂದು ಸಾಧನ ಸಂಸ್ಥೆಯ ಕಾರ್ಯದರ್ಶಿ ಟಿ.ಜೆ. ಸುರೇಶ್ ಹೇಳಿದರು.

ತಾಲ್ಲೂಕಿನ ಕೋಡಿಉಗನೆ ಗ್ರಾಮ ದಲ್ಲಿ ಸಾಧನ ಸಂಸ್ಥೆಯಿಂದ ಸ್ಥಾಪಿತವಾ­ಗಿರುವ ಚೆಂಗೂರು ಮಾರಮ್ಮ ಪುರುಷರ ಸ್ವಸಹಾಯ ಸಂಘ ಮತ್ತು ವೀರಭದ್ರೇಶ್ವರ ರೈತಕೂಟಗಳ ನಾಮ ಫಲಕವನ್ನು ಇತ್ತೀಚೆಗೆ ಅನಾವರಣ ಗೊಳಿಸಿ ಅವರು ಮಾತನಾಡಿದರು.
ಸದಸ್ಯರು ಒಂದೇ ಸಂಘದಲ್ಲಿದ್ದು ಅಭಿವೃದ್ಧಿ ಹೊಂದಿ ಇತರರಿಗೆ ಮಾದರಿ­ಯಾಗಬೇಕು. ಗ್ರಾಮದಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಭಾಗವಹಿಸಬೇಕು. ಗ್ರಾಮವನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪಥದಲ್ಲಿ ಕೊಂಡೊ ಯ್ಯಲು ಕಾರ್ಯೋನ್ಮುಖರಾ ಗ­ಬೇಕು ಎಂದು ಸಲಹೆ ನೀಡಿದರು.

ಸಂಘದ ಸದಸ್ಯರಿಗೆ ಶಿಕ್ಷಣ, ಆರೋಗ್ಯ, ಪರಿಸರ ಕುರಿತು ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅವರಿಗೆ ಇತರೇ ಸರ್ಕಾರಿ ಇಲಾಖೆಗ­ಳೊಂದಿಗೆ ಸಂಬಂಧ ಏರ್ಪಡಿಸಿ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಂಸ್ಥೆಯ ನಿರ್ದೇಶಕ ಮಹೇಶ್ ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರು ಒಂದೇ ಸಂಘದಲ್ಲಿ ಸದಸ್ಯತ್ವ ಪಡೆಯಬೇಕು. ಹಣಕಾಸಿನ ನೆರವು ಸಿಗುತ್ತದೆ ಎಂಬ ಕಾರಣಕ್ಕೆ ಹಲವು ಸಂಘಗಳಲ್ಲಿ ಸದಸ್ಯತ್ವ ಪಡೆಯಬಾರದು. ಹೆಚ್ಚಿನ ಸಾಲ ಪಡೆದು ಮರುಪಾವತಿ ಮಾಡಲಾಗದೆ ಸಂಘಗಳು ದಿವಾಳಿಯಾ ಗುವ ಅಪಾಯವಿದೆ ಎಂದು ಹೇಳಿದರು.

ನಾಮಫಲಕ ಅನಾವರಣ ಕಾರ್ಯ­ಕ್ರಮ­ದಲ್ಲಿ ಸಂಘದ ಪ್ರತಿನಿಧಿಗಳಾದ ಮಹದೇವಯ್ಯ, ರಾಮಸ್ವಾಮಿ, ಪಳನಿಸ್ವಾಮಿ, ಶ್ರೀಕಂಠ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT