ಸೋಮವಾರ, ಆಗಸ್ಟ್ 2, 2021
21 °C
ಕೋವಿಡ್–19 ಪ್ರಕರಣಗಳು 259ಕ್ಕೆ ಏರಿಕೆ, ಆಸ್ಪತ್ರೆಯಲ್ಲಿ 81 ಮಂದಿಗೆ ಚಿಕಿತ್ಸೆ

40 ಜನ ಮನೆಗೆ, 25 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 40 ಮಂದಿ ಕೋವಿಡ್‌–19ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ 25 ಮಂದಿಗೆ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 259ಕ್ಕೆ ಏರಿದೆ. ಸೋಂಕು ಮುಕ್ತರಾಗಿ ಮನೆಗೆ ತೆರಳಿರುವವರ ಸಂಖ್ಯೆ 175ಕ್ಕೆ ಹಿಗ್ಗಿದೆ. ಸದ್ಯ 81 ಸಕ್ರಿಯ ಪ್ರಕರಣಗಳಿದ್ದು, ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಮೂವರು ಮೃತಪಟ್ಟಿದ್ದಾರೆ. 

ಶನಿವಾರ 513 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 484 ವರದಿ ನೆಗೆಟಿವ್‌ ಬಂದಿದೆ (ನಾಲ್ವರು ಮೂಲತಃ ಮೈಸೂರಿನವರು, ಇಲ್ಲಿ ಮಾದರಿ ಪರೀಕ್ಷೆಗೆ ಕೊಟ್ಟಿದ್ದರು).

ಶನಿವಾರ ಖಚಿತವಾಗಿರುವ 25 ಪ್ರಕರಣಗಳ ಪೈಕಿ, ಚಾಮರಾನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು 13 ಪ್ರಕರಣಗಳು ಪತ್ತೆಯಾಗಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ  ಏಳು, ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಾಲ್ವರು ಹಾಗೂ ಹನೂರು ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.  

ಬೆಂಗಳೂರಿನಿಂದ ಬಂದ 12, ಮೈಸೂರಿನಿಂದ ಬಂದ ಮೂವರು, ಉಡುಪಿಯಿಂದ ಬಂದ ಒಬ್ಬರಲ್ಲಿ ಕೋವಿಡ್‌ ದೃಢಪಟ್ಟಿದೆ. ಐವರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಉಳಿದ ನಾಲ್ವರ ಪೈಕಿ ಮೂವರು ಸೋಂಕಿತರ ಸಂಪರ್ಕಿತರಾಗಿದ್ದು, ಒಬ್ಬರು ಕಂಟೈನ್‌ಮೆಂಟ್‌ ವಲಯದ ಸಂಪರ್ಕಿತರು.

ಪ್ರಕರಣಗಳ ವಿವರ:

ಚಾಮರಾಜನಗರ ತಾಲ್ಲೂಕು: ಮೂಡಲ ಅಗ್ರಹಾರದ 38 ವರ್ಷದ ಮಹಿಳೆ, ಸಂತೇಮರಹಳ್ಳಿಯ 59 ವರ್ಷದ ಪುರುಷ, ಪುಣಜನೂರಿನ 21 ವರ್ಷದ ಹುಡುಗ, ನಾಗವಳ್ಳಿಯ 26 ವರ್ಷದ ಯುವಕ, ಉಮ್ಮತ್ತೂರಿನ 30 ವರ್ಷದ ಮಹಿಳೆ, ಚಾಮರಾಜನಗರದ 53 ವರ್ಷದ ಪುರುಷ (ಬೆಂಗಳೂರಿನಿಂದ ಬಂದವರು), ಹರದನಹಳ್ಳಿಯ 66 ವರ್ಷದ ವೃದ್ಧ, ಸಾಗಡೆಯ 6 ವರ್ಷದ ಬಾಲಕ (ಮೂಲ ಗೊತ್ತಾಗಿಲ್ಲ). ಚಾಮರಾಜನಗರದ 5ನೇ ವಾರ್ಡ್‌ನ 31 ವರ್ಷದ ಯುವಕ (ರೋಗಿ ಸಂಖ್ಯೆ 28,910ರ ಸಂಪರ್ಕಿತ). ಸೋಮವಾರ ಪೇಟೆಯ 38 ವರ್ಷದ ಮಹಿಳೆ, 14 ವರ್ಷದ ಬಾಲಕಿ ಮತ್ತು 11 ವರ್ಷದ ಬಾಲಕಿ ಸೋಮವಾರಪೇಟೆ (ಮೈಸೂರಿನಿಂದ ಬಂದವರು). ಮಾದಾಪುರದ ಕಿರಗಸೂರಿನ 42 ವರ್ಷದ ಪುರುಷ (ಉಡುಪಿಯಿಂದ ಬಂದವರು).

ಗುಂಡ್ಲುಪೇಟೆ ತಾಲ್ಲೂಕು: ಅಂಕಹಳ್ಳಿಯ 26 ವರ್ಷದ ಯುವಕ (ರೋಗಿ ಸಂಖ್ಯೆ–25,130ರ ಸಂಪರ್ಕಿತ). ಶಿಂಡನಪುರದ 38 ವರ್ಷದ ಪುರುಷ, 43 ವರ್ಷದ ಪುರುಷ, 45 ವರ್ಷದ ಮಹಿಳೆ (ಬೆಂಗಳೂರಿನಿಂದ ಬಂದವರು). ಹಂಗಳದ 23 ವರ್ಷದ ಯುವಕ, 43 ವರ್ಷದ ಪುರುಷ (ಮೂಲ ಗೊತ್ತಾಗಿಲ್ಲ). ಹೊಸಳ್ಳಿ ಕಾಲೋನಿಯ 42 ವರ್ಷದ ಮಹಿಳೆ (ಕಂಟೈನ್‌ಮೆಂಟ್‌ ವಲಯದ ಸಂಪರ್ಕಿತರು) .

ಕೊಳ್ಳೇಗಾಲ ತಾಲ್ಲೂಕು:ಕೊಳ್ಳೇಗಾಲದ ನಾಯಕರ ಬೀದಿಯ 33 ವರ್ಷದ ಪುರುಷ (ರೋಗಿ ಸಂಖ್ಯೆ 55,279ರ ಸಂಪರ್ಕಿತರು), ಕೊಳ್ಳೇಗಾಲದ ದೇವಾಂಗ ಬೀದಿಯ 30 ವರ್ಷದ ಪುರುಷ, 27 ವರ್ಷದ ಯುವಕ (ಬೆಂಗಳೂರಿನಿಂದ ಬಂದವರು), ಕೊಳ್ಳೇಗಾಲ ಭೀಮನಗರದ 38 ವರ್ಷದ ಪುರುಷ (ಮೂಲ ಗೊತ್ತಾಗಿಲ್ಲ)

ಹನೂರು ತಾಲ್ಲೂಕು: ಬಂಡಳ್ಳಿಯ 29 ವರ್ಷದ ಯುವಕ (ಬೆಂಗಳೂರಿನಿಂದ ಬಂದವರು).

ಗುಣಮುಖ; ದಾಖಲೆ

ಜಿಲ್ಲೆಯಲ್ಲಿ ಶನಿವಾರ 40 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದು, ಜಿಲ್ಲೆಯ ಮಟ್ಟಿಗೆ ಇದು ದಾಖಲೆ. ಇದುವರೆಗೆ ಇಷ್ಟು ಮಂದಿ ಒಂದೇ ದಿನ ಗುಣಮುಖರಾಗಿರಲಿ‌ಲ್ಲ. 

ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲ್ಲೂಕಿನ 50 ಮಂದಿ ಸೋಂಕು ಮುಕ್ತರಾಗಿದ್ದರೆ, ಕೊಳ್ಳೇಗಾಲ ತಾಲ್ಲೂಕಿನ ಎಂಟು ಮಂದಿ, ಚಾಮರಾಜನಗರ ಹಾಗೂ ಹನೂರು ತಾಲ್ಲೂಕಿನ ತಲಾ ಐವರು ಮತ್ತು ಯಳಂದೂರು ತಾಲ್ಲೂಕಿನ ಇಬ್ಬರು ಕೋವಿಡ್‌–19 ಜಯಿಸಿದ್ದಾರೆ. 

ಗುಂಡ್ಲುಪೇಟೆಯ 75 ವರ್ಷ ವೃದ್ಧ ಮನೆಗೆ ತೆರಳಿದ ಹಿರಿಯ ವ್ಯಕ್ತಿ. ಕೊಳ್ಳೇಗಾಲ ತಾಲ್ಲೂಕಿನ ಇಕ್ಕಡಹಳ್ಳಿಯ 14 ವರ್ಷದ ಬಾಲಕ ಅತ್ಯಂತ ಕಿರಿಯ ವ್ಯಕ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.