ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿಗೆ ಸುವರ್ಣ ಮಹೋತ್ಸವದ ಸಂಭ್ರಮ

ಹೊಸ ಪ‍ದಾಧಿಕಾರಿಗಳ ಪದಗ್ರಹಣ ನಾಳೆ, ಆರ್‌.ಎಂ.ಸ್ವಾಮಿ ಅಧ್ಯಕ್ಷ, ಕೆ.ಎಂ.ಮಹದೇವಸ್ವಾಮಿ ಕಾರ್ಯದರ್ಶಿ
Last Updated 23 ಜೂನ್ 2019, 14:55 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ರೋಟರಿ ಸಂಸ್ಥೆ ಸ್ಥಾಪನೆಗೊಂಡು ಐವತ್ತು ವರ್ಷ ಪೂರೈಸುತ್ತಿದ್ದು, ಸು‌ವರ್ಣ ಮಹೋತ್ಸವ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ (ಜೂನ್‌ 25) ನಡೆಯಲಿದೆ.

ಆರ್‌.ಎಂ.ಸ್ವಾಮಿ ನೂತನ ಅಧ್ಯಕ್ಷ ಹಾಗೂ ಕೆ.ಎಂ.ಮಹದೇವಸ್ವಾಮಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಸ್ಥಾಪಕ ಸದಸ್ಯ ಶ್ರೀನಿವಾಸ ಶೆಟ್ಟಿ, ‘1970ರ ಸೆಪ್ಟೆಂಬರ್‌ 29ರಂದು 29 ಸದಸ್ಯರೊಂದಿಗೆ ಸ್ಥಾಪನೆಗೊಂಡ ರೋಟರಿ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ. 49 ವರ್ಷಗಳಿಂದಲೂ ಸಂಸ್ಥೆ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡು ಬಂದಿದೆ. ಉಚಿತ ಕಣ್ಣಿನ ತಪಾಸಣೆ ಶಿಬಿರಗಳು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು, ಪೋಲಿಯೊ ನಿಯಂತ್ರಣ ಕಾರ್ಯಕ್ರಮ, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ.. ಹೀಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ’ ಎಂದರು.

ನಿಯೋಜಿತ ಅಧ್ಯಕ್ಷ ಆರ್‌.ಎಂ.ಸ್ವಾಮಿ ಅವರು ಮಾತನಾಡಿ, ‘ಪದಗ್ರಹಣ ಸಮಾರಂಭದಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. 11.30ಕ್ಕೆ ವಸ್ತ್ರ ಸಂಗ್ರಹಾಲಯ ಮತ್ತು ಉಚಿತ ವಸ್ತ್ರ ವಿತರಣೆ ಮಳಿಗೆ ಉದ್ಘಾಟನೆ ನಡೆಯಲಿದೆ. ಜನರು ತಮಗೆ ಅವಶ್ಯಕ ಇಲ್ಲದ ವಸ್ತುಗಳನ್ನು ನಮ್ಮ ಸಂಸ್ಥೆಗೆ ಕೊಟ್ಟರೆ, ಅವುಗಳನ್ನು ಅಗತ್ಯವಿರುವ ಬಡಜನರಿಗೆ ಉಚಿತವಾಗಿ ವಿತರಿಸಲಿದ್ದೇವೆ. ಇಡೀ ವರ್ಷ ಈ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಅಪಾಯಕ್ಕೆ ಸಿಲುಕಿರುವ ಹಾವುಗಳನ್ನು ಹಿಡಿದು ರಕ್ಷಿಸುವ ಸ್ನೇಕ್‌ ಚ್ಯಾಂಪ್‌ (ಮಂಜು) ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶರತ್‌ ಕುಮಾರ್‌ ಜೈಕರ್‌ ಅವರನ್ನು ಸನ್ಮಾನಿಸಲಾಗುವುದು. ಎಂಎಸ್ಸಿ ಕೃಷಿ ವಿಷ‌ಯದಲ್ಲಿ ಚಿನ್ನದ ಪದಕ ಗಳಿಸಿರುವ ಆಲೂರಿನ ಎಸ್‌.ರಶ್ಮಿ, ಬಿಎಸ್ಸಿ ಪದವಿಯಲ್ಲಿ 1,000 ಅಂಕಗಳಿಗೆ 994 ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿ.ಮೌಲ್ಯ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ತಾಲ್ಲೂಕಿಗೆ ಮೊದಲ ಸ್ಥಾನ ಗಳಿಸಿರುವ ಕೆ.ವಿ.ಪ್ರಿಯದರ್ಶಿನಿ ಮತ್ತು ಎಸ್‌.ಲಕ್ಷ್ಮಿ ಅವರನ್ನು ಸನ್ಮಾನಿಸಲಾಗುವುದು. ಜೊತೆಗೆ, ಶಾಲಾ ಮಕ್ಕಳಿಗೆ ಪುಸ್ತಕಗಳ ವಿತರಣೆ ಮತ್ತು 25 ಮಕ್ಕಳಿಗೆ ಸಮವಸ್ತ್ರ ವಿತರಣೆಯನ್ನೂ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಸ್ಥಾಪಕ ಸದಸ್ಯ ಜಿ.ಆರ್‌.ಅಶ್ವತ್ಥನಾರಾಯಣ, ನಿರ್ಗಮಿತ ಅಧ್ಯಕ್ಷ ಡಿ.ನಾಗರಾಜು, ನಿಯೋಜಿತ ಕಾರ್ಯದರ್ಶಿ ಕೆ.ಎಂ.ಮಹದೇವಸ್ವಾಮಿ ಇದ್ದರು.

ವರ್ಷದ ಯೋಜನೆಗಳು

ತಮ್ಮ ಒಂದು ವರ್ಷದ ಅಧಿಕಾರಾವಧಿಯಲ್ಲಿ ಸಂಸ್ಥೆಯ ವತಿಯಿಂದ ಕೈಗೊಳ್ಳಲಾಗುವ ಯೋಜನೆಗಳನ್ನೂ ಸ್ವಾಮಿ ಪಟ್ಟಿ ಮಾಡಿದರು.

* ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆ ಸ್ಥಾಪನೆ

* ಪ್ರತಿ ತಿಂಗಳ ಮೊದಲ ಭಾನುವಾರ ರೋಟರಿ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ

* ಹೃದಯ, ನರರೋಗ, ಕ್ಯಾನ್ಸರ್‌ ತಪಾಸಣೆ, ರಕ್ತದಾನ ಶಿಬಿರಗಳ ಆಯೋಜನೆ

* ಚಾಮರಾಜನಗರದಲ್ಲಿ ಇ–ಶೌಚಾಲಯ ಸ್ಥಾಪನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT