ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸಂವಿಧಾನ ಶಿಲ್ಪಿಯ ಜಯಂತಿ ಆಚರಣೆ

Last Updated 14 ಏಪ್ರಿಲ್ 2021, 13:04 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತಬುಧವಾರ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 130ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಸಿಹಿ ವಿತರಣೆ:ಜನ್ಮದಿನ ಆಚರಣೆ ಅಂಗವಾಗಿ ನಗರದ ಭುವನೇಶ್ವರಿ ವೃತ್ತದಲ್ಲಿ ದಲಿತ ಸಂಘಟನಗಳ ಒಕ್ಕೂಟದ ವತಿಯಿಂದ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.

ಮುಖಂಡರಾದ ಕೆ.ಎಂ.ನಾಗರಾಜು, ಸಿ.ಎಂ.ಶಿವಣ್ಣ, ಸಿ.ಎಂ.ಕೃಷ್ಣಮೂರ್ತಿ, ಸಿ.ಕೆ.ಮಂಜುನಾಥ್, ರಾಮಸಮುದ್ರ ಸುರೇಶ್, ಮಹದೇವಸ್ವಾಮಿ ನಲ್ಲೂರು, ಮಹೇಶ್‌ಗೌಡ, ಜಯಕುಮಾರ್, ಆಟೊ ಉಮೇಶ್, ಶಿವಮಲ್ಲು, ಮಂಜೇಶ್, ಗಣೇಶ್ ‌ಪ್ರಸಾದ್‌, ಹರದನಹಳ್ಳಿ ಜಯಶಂಕರ್ ‌ಎಚ್, ಮೂಕಳ್ಳಿ ರೇವಣ್ಣ, ಕೃಷ್ಣಮೂರ್ತಿ, ಉಮೇಶ್ ‌ಕುಮಾರ್, ಮಹದೇವ್, ಮಲ್ಲಿಕಾರ್ಜುನ್ ಇದ್ದರು.

ಬಿಜೆಪಿ ಕಚೇರಿ:ನಗರದ ಮೇಘಾ ಕಾಂಪ್ಲೆಕ್ಸ್‌ನಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷಆರ್.ಸುಂದರ್ ಅವರು ಮಾತನಾಡಿ, ‘ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನಾಯಕ. ಅವರು ಭಾರತ ಸಂವಿಧಾನವನ್ನು ರಚಿಸಿ ಸರ್ವ ಜನಾಂಗದವರಿಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಕೂಡ ಅಂಬೇಡ್ಕರ್ ಅವರ ಪಂಚತೀರ್ಥ ಸ್ಥಳಗಳ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಗೌರವ ನೀಡಿದೆ’ ಎಂದರು.

ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕಿನಕಹಳ್ಳಿರಾಚಯ್ಯ ಮಾತನಾಡಿದರು. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ, ಮಂಗಲಶಿವಕುಮಾರ್, ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್, ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರ್, ಮಮತ, ಉಪಾಧ್ಯಕ್ಷರಾದ ಪಿ.ವೃಷಬೇಂದ್ರಪ್ಪ, ಮಂಗಳಮ್ಮ, ರಾಜ್ಯ ಕಾರ‍್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ಆರ್.ಬಾಲರಾಜ್, ಸಿ.ಎನ್.ಬಾಲರಾಜು, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್ ಇತರರು ಇದ್ದರು.

ಕಾಂಗ್ರೆಸ್‌ ಕಚೇರಿ:‘ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ ಹಾಗೂ ವಿಶ್ವ ಮಾನವ, ಶೋಷಿತ ಸಮಾಜದ ಧ್ವನಿಯಾಗಿ ಸಂವಿಧಾನ ಬದ್ಧವಾಗಿ ಎಲ್ಲ ವರ್ಗಗಳಿಗೆ ಮೀಸಲಾತಿಯ ಹಕ್ಕು ಕಲ್ಪಿಸಿಕೊಟ್ಟ ಮಹಾನ್ ನಾಯಕ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಬಣ್ಣಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್‌ಸಮಿತಿ ಕಚೇರಿಯಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಅವರು ಮಾತನಾಡಿದರು. ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಎಸ್‌ಸಿ ಘಟಕದ ಅಧ್ಯಕ್ಷ ಕೊಳ್ಳೇಗಾಲ ನಾಗರಾಜು, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್.ಗುರುಸ್ವಾಮಿ, ತಾಲ್ಲೂಕು ಪಂಚಾಯಿತಿ ಅದ್ಯಕ್ಷೆ ಶೋಭಾ, ಸದಸ್ಯರಾದ ಕುಮಾರನಾಯಕ, ರೇವಣ್ಣ, ಮಹದೇವಶೆಟ್ಟಿ ಇತರರು ಇದ್ದರು.

ಜಿಲ್ಲಾ ಸೇವಾದಳ ಸಮಿತಿ:ಜಿಲ್ಲಾ ಸೇವಾದಳ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಅಬೇಂಡ್ಕ್‌ರ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿದರು.

ಸೇವಾದಳದ ಕೇಂದ್ರ ಸಮಿತಿಯ ಸದಸ್ಯ ಆರ್.ನಾಗರಾಜು, ಸೇವಾದಳದ ವಲಯ ಸಂಘಟಕ ಕೆ.ಈರಯ್ಯ ಪಿ.ಮಹದೇವು, ಸತೀಶ್ ರಾಜಶೇಖರ್‌ನಾಯ್ಕ ಇತರರು ಇದ್ದರು.

ನಗರಸಭೆ ಕಚೇರಿಯಲ್ಲಿ ಆಚರಣೆ: ‘ದೇಶದ ಅಭಿವೃದ್ದಿಗೆ ಪೂರಕವಾದ ಸಂವಿಧಾನವನ್ನು ನೀಡುವ ಜೊತೆಗೆ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟ ಮಹಾ ನಾಯಕ ಅಂಬೇಡ್ಕರ್’ ಎಂದು ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ ಅವರು ಬಣ್ಣಿಸಿದರು.
ನಗರದ ನಗರಸಭಾ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರು ಅಖಂಡ ಭಾರತದ ಏಕತೆ ಮತ್ತು ಸೌರ್ವಭೌಮತೆಗೆ ಒಪ್ಪುವಂತ‌ಹ ಸಂವಿಧಾನವನ್ನು ನಮಗೆ ನೀಡಿದರು’ ಎಂದರು.

ನಗರಸಭೆ ಆಯುಕ್ತ ಕರಿಬಸವಯ್ಯ ಮಾತನಾಡಿದರು. ನಗರಸಭಾ ಸದಸ್ಯರಾದ ಸುದರ್ಶಗೌಡ, ಸುರೇಶ್ ನಾಯಕ, ಅಬ್ರಾರ್ ಅಹಮದ್‌, ಖಲೀಲ್ಲಾ, ಮಹೇಶ್, ಚಿನ್ನಮ್ಮ, ಗಾಯತ್ರಿ, ಮಮತಾ, ರಾಘವೇಂದ್ರ, ಮಹದೇವಯ್ಯ, ಮನೋಜ್ ‌ಪಟೇಲ್, ಪ್ರಕಾಶ್, ಮುಖಂಡರಾದ ಸಿ.ಕೆ. ರವಿಕುಮಾರ್, ಚಿಕ್ಕರಾಜು, ಚಂದ್ರಶೇಖರ್, ಶಿವು ರಾಮಸಮುದ್ರ, ಅಧಿಕಾರಿಗಳಾದ ಸರವಣ, ಗಿರಿಜಾ, ಜಯಶೀಲಾ, ವೆಂಕಟನಾಯಕ್ ಮೊದಲಾದವರು ಇದ್ದರು.

‘ತುಳಿತಕ್ಕೆ ಒಳಗಾದವರಿಗಾಗಿ ಜೀವನ ಸಮರ್ಪಣೆ’

ನಗರದ ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು, ‘ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಿಕೊಳ್ಳುವ ಜೊತೆಗೆ ಅವರಂತೆ ಛಲವಿದ್ದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು. ಸಮಾನತೆ ಶಿಕ್ಷಣ ಸಿಗಬೇಕೆಂಬ ಕಲ್ಪನೆಯನ್ನು ಹೊಂದಿದ್ದ ಅಂಬೇಡ್ಕರ್ ಅವರು ತಮ್ಮ ಜೀವಿತವನ್ನು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವವರಿಗಾಗಿ ಸಮರ್ಪಣೆ ಮಾಡಿದ್ದರು’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಹಮದ್ ರೋಷನ್ ಷಾ, ವಕೀಲರಾದ ಕರಾಟೆ ಎಂ.ರಾಜೇಂದ್ರ, ಪುಟ್ಟಸ್ವಾಮಿ, ಬಿ.ಪ್ರಸನ್ನಕುಮಾರ್, ಮಹೇಂದ್ರ ಮಾತನಾಡಿದರು.
ವಕೀಲರ ಸಂಘದ ಖಜಾಂಚಿ ಎಂ.ನಾಗಮ್ಮ, ಎ.ರಮೇಶ್, ನಂಜುಂಡಯ್ಯ, ನಾಗಣ್ಣ, ಎನ್.ಕೆ.ವಿರುಪಾಕ್ಷಸ್ವಾಮಿ, ಎಚ್.ಎನ್.ಲೋಕೇಶ್, ಕುಮಾರ್, ಪುಟ್ಟರಾಜು, ಚಂದ್ರು, ಎಚ್,ಎಸ್.ಮಹೇಂದ್ರ, ಎಸ್.ಆರ್.ಮೇಘ ಇತರರು ಇದ್ದರು.

ಅಂಬೇಡ್ಕರ್‌ ವೃತ್ತದ ನಾಮಫಲಕ ಅನಾವರಣ

ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಅಂಗವಾಗಿ ದೊಡ್ಡರಾಯಪೇಟೆ ಕ್ರಾಸ್ ನಲ್ಲಿ ಗ್ರಾಮಸ್ಥರ ವತಿಯಿಂದ ಅಳವಡಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ನಾಮಫಲಕವನ್ನು ನಳಂದ ವಿಶ್ವವಿದ್ಯಾಲಯಕ್ಕೆ ಬಂದಿರುವ ಅಮೆರಿಕದ ಬೌದ್ಧ ಸನ್ಯಾಸಿನಿ ಸುಖ ಅವರು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ‘ದೊಡ್ಡರಾಯಪೇಟೆಯ ಗ್ರಾಮಸ್ಥರು ಅಂಬೇಡ್ಕರ್ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡುವ ಮೂಲಕ ಪ್ರತಿನಿತ್ಯ ಅವರ ಹೆಸರನ್ನು ಸ್ಮರಿಸುವ ಕೆಲಸ ಮಾಡಿರುವುದು ಒಳ್ಳೆಯ ಕೆಲಸ’ ಎಂದರು.

ನಳಂದ ವಿಶ್ವವಿದ್ಯಾನಿಲದ ಕಾರ್ಯದರ್ಶಿ ಬೋದಿದತ್ತ ಥೇರಾ ಪುಷ್ಷಾರ್ಚನೆ ಮಾಡಿ ಮಾತನಾಡಿ, ‘ದೊಡ್ಡರಾಯಪೇಟೆ ಕ್ರಾಸ್‌ಗೆ ಅಂಬೇಡ್ಕರ್ ವೃತ್ತ ಎಂದು ನಾಮಫಲಕ ಅಳವಡಿಸುವ ಮೂಲಕ ಅಂಬೇಡ್ಕರ್ ಅವರನ್ನು ಪ್ರತಿನಿತ್ಯ ಸ್ಮರಿಸಿಕೊಳ್ಳುವಂತೆ ಮಾಡಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ’ ಎಂದರು.

ರಾಮಸಮುದ್ರ ಪೂರ್ವ ಪೋಲಿಸ್ ಠಾಣೆಯ ಇನ್‌ಸ್ಪೆಕ್ಟರ್‌ ಎಸ್.ಆನಂದ್, ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗಸುಂದ್ರಮ್ಮ, ವಕೀಲರಾದ ಅರುಣ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು, ಬಿಎಸ್‌ಐ ಜಿಲ್ಲಾ ಉಪಾಧ್ಯಕ್ಷ ಉಮೇಶ್ ‌ಕುದರ್, ಮುಖಂಡರಾದ ಮೂರ್ತಿ, ಪುಟ್ಟಸ್ವಾಮಿ, ನಟರಾಜು, ಬಸವಣ್ಣ, ಪುರುಷೋತ್ತಮ್, ಅಂಗಡಿರಾಜು, ಶಿವಶಂಕರ್, ಪ್ರಕಾಶ್, ದೊಡ್ಡರಾಯಪೇಟೆ ಗ್ರಾಮದ ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು, ಯಜಮಾನರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT