ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಹುಲಿ ಕಾರ್ಯಾಚರಣೆ ಆರಂಭ

Last Updated 9 ಅಕ್ಟೋಬರ್ 2019, 10:53 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರೈತನ ಮೇಲೆ ದಾಳಿ ನಡೆಸಿ ಕೊಂದಿರುವ ಹುಲಿ ಯ ವಿರುದ್ಧ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಮಹಾರಾಷ್ಟ್ರದಲ್ಲಿ ಹೆಣ್ಣು ಹುಲಿ ಅವನಿಯನ್ನು ಕೊಂದಿದ್ದ ಹೈದರಾಬಾದ್‌ ನ ಅಸ್ಗರ್ ಅಲಿ ಹಾಗೂ ಅವರ ತಂದೆ ಶಫತ್ ಅಲಿ ಖಾನ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಆನೆಗಳನ್ನು‌ ಬಳಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಸದ್ಯ ಬಂಡೀಪುರ ವ್ಯಾಪ್ತಿ ಯಲ್ಲಿ ಮಳೆ‌ಬರುತ್ತಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಆಕ್ಷೇಪ: ಹುಲಿಯನ್ನು ಸೆರೆಹಿಡಿಯಲು ಸಾಧ್ಯವಾಗದಿದ್ದರೆ ಕೊಲ್ಲಲು ನಿರ್ಧರಿಸಲಾಗಿದೆ ಎಂಬ ಅರಣ್ಯ ಇಲಾಖೆಯ‌ ಹೇಳಿಕೆಗೆ ವನ್ಯಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಕೊಲ್ಲುವುದಿಲ್ಲ, ಹುಲಿಯನ್ನು ಸೆರೆ‌ಹಿಡಿಯುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಹುಲಿಯನ್ನು ಕೊಲ್ಲುವುದಿದ್ದರೆ‌ ಇಷ್ಟು ದಿನ ಕಾಯುತ್ತಿರಲಿಲ್ಲ. ಸೆರೆ ಹಿಡಿಯುವುತ್ತೇವೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಹೇಳಿದ್ದಾರೆ.

ಪರಿಹಾರ ವಿತರಣೆ: ಈ ಮಧ್ಯೆ ಹುಲಿ ದಾಳಿಯಿಂದ ಮೃತಪಟ್ಟ ರೈತ ಶಿವಲಿಂಗಪ್ಪ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿವರಿಸಲಾಗಿದೆ. ಮಗನಿಗೆ ಉದ್ಯೋಗ ಕೊಡುವ ಭರವಸೆಯನ್ನೂ ಬಾಲಚಂದ್ರ ಅವರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT