ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಶ್ರೂಷಕರ ಅಂತರಂಗ: ದೇವರೇ.. ಕಾಯಕ ಮಾಡಲು ಹಾರೈಸು

Last Updated 2 ಮೇ 2021, 19:30 IST
ಅಕ್ಷರ ಗಾತ್ರ

ಯಳಂದೂರು: ‘ರೋಗಿಗಳ ಸೇವೆ ಮಾಡಲು ನನಗೆ ಇಂದು ಹೆಚ್ಚುಶಕ್ತಿ ಕೊಡು. ಯಾವ ಕಾಯಿಲೆ ಪೀಡಿತರಿಗೂ, ಶುಶ್ರೂಷೆ ನೀಡುತ್ತೇವೆ...'

–ಪ್ರತಿ ದಿನ ಬೆಳಕು ಹರಿಯುವಾಗ ನಾನು ಪ್ರಾರ್ಥಿಸುವುದು ಇಷ್ಟೇ.

ಆಸ್ಪತ್ರೆಗೆ ಪ್ರತಿದಿನ ನೂರಾರು ಜನರು ಚಿಕಿತ್ಸೆಗೆ ಬರತ್ತಾರೆ. ನಿತ್ಯವೂ ಕೋವಿಡ್ಪರೀಕ್ಷೆ ಮತ್ತು ಸೋಂಕಿತರನ್ನು ಪತ್ತೆ ಹಚ್ಚಬೇಕು. ಕೋವಿಡ್ ವಾರ್ ರೂಂ ಈಗಷ್ಟೇಆರಂಭವಾಗಿದೆ. ಇಲ್ಲಿ ಸೋಂಕಿತರಿಗೆ ಧೈರ್ಯ ತುಂಬಿ ಹೋಂ ಐಸೊಲೇಷನ್‌ಗೆ ಕಳುಹಿಸಬೇಕು.

ಆಗಾಗ ಬರುವ ಸರ್ಕಾರಿ ಸುತ್ತೋಲೆಗಳಿಗೆ ವರದಿ ಒಪ್ಪಿಸಬೇಕು. ಇದಕ್ಕೆಲ್ಲ ತಾಳ್ಮೆಬೇಕು. ಕುಟುಂಬದವರು ಮತ್ತು ಆಸ್ಪತ್ರೆಯ ಮುಖ್ಯಸ್ಥ ಡಾ.ಶ್ರೀಧರ್ ಅವರ ಬೆಂಬಲ ನಮಗೆಆತ್ಮವಿಶ್ವಾಸ ನೀಡುತ್ತದೆ. ಕೆಲಸಗಳಿಗೆ ಊರುಗೋಲಾಗಿ ನಿಲ್ಲುತ್ತದೆ.

ಪತಿ ಸೈನಿಕರಾಗಿದ್ದವರು. ಮಕ್ಕಳು ಹೈದರಾಬಾದ್ ಮತ್ತು ಮೈಸೂರಿನಲ್ಲಿ ಇದ್ದು, ದೇಶಸೇವೆಯ ಮಾತನಾಡುತ್ತಾರೆ. ಇವರ ಸ್ಫೂರ್ತಿದಾಯಕ ಮಾತುಗಳು ಕೆಲಸ ಮಾಡುವ ಉತ್ಸಾಹತುಂಬುತ್ತವೆ. ಸೇವೆಗೆ ಅರ್ಪಿಸಿಕೊಂಡ ಬಹಳಷ್ಟು ನರ್ಸ್‌ಗಳು ಸದಾ ಜೊತೆಯಲ್ಲಿ ಇದ್ದು,ಸುಲಲಿತ ಕೆಲಸಗಳಿಗೆ ನೆರವಾಗುತ್ತಾರೆ. 30 ವರ್ಷಗಳ ಸೇವೆಯಲ್ಲಿಕಂಡು-ಕೇಳರಿಯದ ಸಂಕಷ್ಟವನ್ನು ದೇಶ ಮತ್ತು ಜನ ಸಮುದಾಯ ಇಂದು ಎದುರಿಸುತ್ತದೆ. ಇಂತಹ ಸಮಯ ಜನರೊಟ್ಟಿಗಿದ್ದು, ರೋಗಿಗಳಿಗೆ ನೈತಿಕ ಬೆಂಬಲ ನೀಡಬೇಕು. ಇಂತಹ ಸಮಯಕರ್ತವ್ಯಕ್ಕೆ ಬೆನ್ನುಹಾಕಿದರೆ ವೃತ್ತಿಗೆ ಅಪಮಾನ ಮಾಡಿದಂತೆ.

ಈಗ ಆಸ್ಪತ್ರೆಗೆ ಬರುತ್ತಲೇ ಕೆಲಸದ ಒತ್ತಡ ಹೆಚ್ಚಾಗುತ್ತದೆ.ಆರಂಭದಲ್ಲಿ ಇದ್ದ ಕೋವಿಡ್ಭಯ ನಮ್ಮನ್ನು ಈಗ ಕಾಡುತ್ತಿಲ್ಲ. ಆದರೂ, ನಾವು ಸುರಕ್ಷಿತರಾಗಿದ್ದು, ಜನರ ಆರೋಗ್ಯಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

(ಯಳಂದೂರು ತಾಲ್ಲೂಕು ಆಸ್ಪತ್ರೆಯ ಶುಶ್ರೂಷಕಿಯರ ಮುಖ್ಯಸ್ಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT