ಯಳಂದೂರು: ಪ್ರಕೃತಿಯಲ್ಲಿ ಜೇಡ ಪ್ರಪಂಚ ಹೆಚ್ಚು ವೈವಿಧ್ಯಮಯ ಹಾಗೂ ವರ್ಣಮಯವಾಗಿದ್ದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಹಸಿರುಮಯ ಆವಾಸದ ನಡುವೆ ಸಣ್ಣಪುಟ್ಟ ಪ್ರದೇಶಗಳಲ್ಲೂ ಹತ್ತಾರು ಜೇಡ ಪ್ರಭೇದಗಳು ಜೀವಿಸುತ್ತವೆ.

ನೋಡಲು ಭಯ ಹುಟ್ಟಿಸುವಂತೆ ಕಂಡರೂ ಕೆಲವು ವಿಷರಹಿತ ಜೇಡಗಳು ವಿಸ್ಮಯಕಾರಿ ಚಟುವಟಿಕೆಯಿಂದ ಗಮನ ಸೆಳೆಯುತ್ತವೆ. ಪ್ರಸ್ತುತ ಬಿಳಿಗಿರಿ ರಂಗನಾಥ ಸ್ವಾಮಿ ಅರಣ್ಯದಲ್ಲಿ ಹೆಜ್ಜೇಡಗಳು ಮಳೆಗಾಲದ ನಂತರ ವಿಶಾಲವಾದ ಬಲೆಗಳನ್ನು ಹೆಣೆಯುವ ಕಾಯಕದಲ್ಲಿ ತೊಡಗಿರುವ ದೃಶ್ಯ ಚೇತೋಹಾರಿಯಾಗಿದ್ದು ಕಣ್ಮನ ಸೆಳೆಯುತ್ತಿವೆ.

ತಾಲ್ಲೂಕಿನ ಬಿಳಿಗಿರಿ ವನದಲ್ಲಿ ವನ್ಯಜೀವಿಗಳು ಹಾಗೂ ವೈವಿಧ್ಯಮಯ ವಿಶಿಷ್ಟ ಸಸ್ಯ ಸಂಪತ್ತು ಕಾಣಬಹುದು. ಅವುಗಳಲ್ಲಿ ಅಪರೂಪದ ಜೇಡಗಳು ಸೇರಿವೆ. ಪಶ್ಚಿಮ ಮತ್ತು ಪೂರ್ವಘಟ್ಟಗಳ ಶ್ರೀಮಂತ ತಾಣಗಳಲ್ಲಿ ಗಿಡಮರಗಳಲ್ಲಿ ನಕ್ಷೆ ಜೇಡ, ನೆಲಕೊರೆದು ಜೀವಿಸುವ ಟಾರಂಟುಲಾ ಪ್ರಬೇಧಗಳ ಜೇಡ ಹಾಗೂ ಸಾಮಾನ್ಯ ಜೇಡಗಳು ವಾಸಿಸುತ್ತಿವೆ. ಇವು ಜೈವಿಕ ಕೀಟ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ನೈಸರ್ಗಿಕ ಕೀಟ ನಾಶಕದಂತೆ ಪರಿಸರದ ಸಸ್ಯ ಸಂರಕ್ಷಣೆಯಲ್ಲೂ ಜೇಡಗಳೂ ಪ್ರಧಾನ ಪಾತ್ರ ವಹಿಸುತ್ತವೆ.

ಜನವರಿ ನಂತರ ಚಳಿಗಾಲದ ಋತುವಿನಲ್ಲಿ ಹೆಜ್ಜೇಡಗಳು ಕಾಫಿ ತೋಟಗಳಲ್ಲಿ, ಅರಣ್ಯದೊಳಗಿನ ದೊಡ್ಡ ಪೊದೆ, ಎತ್ತರದ ಮರಗಳಲ್ಲಿ ಬಲೆಯನ್ನು ಕಟ್ಟಿಕೊಂಡು ಜೀವಿಸುತ್ತವೆ. ಬಹುತೇಕ ಗಂಡು ಮತ್ತು ಹೆಣ್ಣು ಜೇಡಗಳು ಹತ್ತಿರದಲ್ಲಿ ಬಲೆ ಹೆಣೆಯುತ್ತವೆ. ಭಾರತೀಯ ಜೇಡಗಳು ಕೊಳವೆ, ಹಾಳೆ, ತ್ರಿಕೋನದ ಮಾದರಿಯಲ್ಲಿ ಜಾಲಗಳನ್ನು ನಿರ್ಮಿಸುತ್ತವೆ. ಅಲಂಕಾರಿಕ ಟ್ರೀಸ್ಪೈಡರ್ ಮತ್ತು ವಿಶಿಷ್ಟ ಕಪ್ಪು ಮತ್ತು ಬೂದು ಮಾದರಿಯ ಜೇಡಗಳನ್ನು ಬರಿಗಣ್ಣಿನಲ್ಲಿ ಕಾಣಬಹುದು ಎನ್ನುತ್ತಾರೆ ಕೀಟ ತಜ್ಞರು.

ಬಿಳಿಗಿರಿ ರಂಗನಾಥ ಸ್ವಾಮಿ ಕಾನನದಲ್ಲಿ ಯುವ ಸಂಶೋಧಕರು ಜೇಡ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಮರ ಜೇಡ ಮತ್ತು ಮನೆ ಜೇಡಗಳ ವ್ಯತ್ಯಾಸ ಹಾಗೂ ಇವುಗಳ ಆವಾಸ ಅರಿಯುವ ಪ್ರಯತ್ನಗಳು ನಡೆದಿವೆ. ಜೇಡಗಳು ಬಲೆಗಳನ್ನು ಹೆಣೆಯುವ ಬಗೆ, ಕಸಕಡ್ಡಿಗಳ ನಡುವೆ ಅಡಗಿ ಕುಳಿತು ಜಿಗಿದು ಬೇಟೆಯಾಡುವ ಕಲೆ, ಸಸ್ಯ ಉತ್ಪನ್ನಗಳು ಮತ್ತು ಮಕರಂದವನ್ನು ಸೇವಿಸುವ ಬಗೆಯನ್ನು ದಾಖಲೀಕರಣ ಮಾಡಲಾಗುತ್ತದೆ.

ಕೃಷಿ ಪರಿಸರ ಮತ್ತು ಕಾಡುಗಳ ಹೊರವಲಯದಲ್ಲಿ ಕೀಟ ನಾಶಕ ಬಳಕೆಯಿಂದ ಜೇಡ ಸಂಕುಲಗಳಿಗೆ ಅಪಾಯ ಎದುರಾಗಿದ್ದು, ಶ್ರೀಮಂತ ಜೀವ ಪರಿಸರದ ಸೂಚಿಯಾದ ಜೇಡಗಳ ನಾಶದಿಂದ ಜೀವ ವೈವಿಧ್ಯತೆಗೂ ಕಂಟಕ ಎದುರಾಗುತ್ತದೆ ಎನ್ನುತ್ತಾರೆ ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ.

ವಂಶಾಭಿವೃದ್ಧಿ ಸಮಯದಲ್ಲಿ ಗಂಡು ಜೇಡ ಸಾಮಾನ್ಯವಾಗಿ ಹೆಣ್ಣನ್ನು ಹಿಂಬಾಲಿಸುತ್ತದೆ. ದಿನಗಟ್ಟಲೆ ಹೆಣ್ಣಿನ ಬಲೆಗೆ ಅಂಟಿಕೊಂಡು ಕಾಯುತ್ತವೆ. ಒಮ್ಮೆ ಮಿಲನವಾದರೆ 50 ರಿಂದ 60 ಮೊಟ್ಟೆಗಳನ್ನು ಹೊತ್ತು ಬಲೆಯಲ್ಲಿ ಅವಿತಿರುತ್ತದೆ ಎನ್ನುತ್ತಾರೆ ಅವರು.

ಜೇಡಗಳು ಬಲೆಯನ್ನು ಹೆಣೆದು ಸೊಳ್ಳೆ, ನೊಣ, ತಿಗಣೆ ಮತ್ತಿತರ ಕೀಟಗಳನ್ನು ಸೆರೆಹಿಡಿದು ಭಕ್ಷಿಸುತ್ತವೆ. ಕೀಟಗಳ ಕಾಟದಿಂದ ಮನುಕುಲ ರಕ್ಷಣೆ ಮಾಡುವಲ್ಲೂ ಜೇಡಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೊಲ, ಗದ್ದೆಗಳಲ್ಲಿ ಬೆಳೆಗಳಿಗೆ ಹಾನಿ ಉಂಟುಮಾಡುವ ನುಸಿ ಕೀಟಗಳನ್ನು ಜೇಡ ತಿನ್ನುತ್ತವೆ. ಆದರೆ, ಮನೆಯಲ್ಲಿ ಕಂಡುಬರುವ ಜೇಡ ತೊಂದರೆ ನೀಡದಿದ್ದರೂ ಸ್ವಚ್ಛತೆ ಮಾಡಿಕೊಳ್ಳಬೇಕು, ತೋಟ ಜೇಡ, ತೋಳ ಜೇಡ, ಬಾಳೆ ಜೇಡ, ಮನೆ ಜೇಡಗಳು ನಶಿಸಿದರೆ ಅಡವಿ, ಬಯಲು, ಸಕಲ ಜೀವಾವರಗಳ ಉಲ್ಲಾಸ ತಾಣಗಳು ಅಳಿವಿನತ್ತ ಸಾಗುತ್ತವೆ.

- ‘ಜೇಡಗಳ ವಿಶೇಷ’

ಧ್ರುವ ಪ್ರದೇಶ ಹಾಗೂ ಅತಿ ಎತ್ತರದ ಪ್ರದೇಶ ಹೊರತುಪಡಿಸಿ ಉಷ್ಣವಲಯದ ಕಾಡು ಮನೆಗಳು ನೀರಿನ ಚಾಚುಗಳವರೆಗೂ ಜೇಡಗಳ ನೆಲೆ ಕಾಣಬಹುದು. ಜಿ ಗಿಜೇಡ ತೋಳಜೇಡ ಹಾಗೂ ಬಲೆ ನೇಯುವ ಜೇಡ ಪ್ರಪಂಚವನ್ನು ಎಲ್ಲೆಡೆ ವೀಕ್ಷಿಸಬಹುದು. ಜಾಗತಿಕವಾಗಿ 51770ಕ್ಕೂ ಹೆಚ್ಚು ಜೇಡ ಪ್ರಭೇಧಗಳಿದ್ದು ಭಾರತದಲ್ಲಿ 1983 ಹಾಗೂ ಘಟ್ಟ ಪ್ರದೇಶಗಳಲ್ಲೂ ನೂರಾರು ಜೇಡ ಕುಲಗಳಿವೆ. ಜೇಡಗಳಲ್ಲಿ 2 ಮಾತ್ರ ವಿಷಕಾರಿಯಾಗಿವೆ ಎನ್ನುತ್ತಾರೆ ಏಟ್ರೀ ಸಂಸ್ಥೆಯ ಸಂಶೋಧಕ ಸಿ.ಮಾದೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.