ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಳಿಗಿರಿರಂಗನಬೆಟ್ಟ: ಹುಂಡಿಯಲ್ಲಿ ₹ 35.79 ಲಕ್ಷ ಸಂಗ್ರಹ

Published 3 ಜುಲೈ 2024, 15:34 IST
Last Updated 3 ಜುಲೈ 2024, 15:34 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಗೋಲಕ ಹಣದ ಎಣಿಕೆ ನಡೆಯಿತು.

ಒಟ್ಟು ₹35,79,180 ಸಂಗ್ರಹವಾಗಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ದೇವಾಲಯದ ಖಾತೆಗೆ ಜಮೆ ಮಾಡಲಾಯಿತು.

ಹುಂಡಿ ಎಣಿಕೆ ಕಾರ್ಯ ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಿತು. ಸಾಮಾನ್ಯವಾಗಿ ಮೂರು ಹಂತದಲ್ಲಿ ಮೌಲ್ಯಮಾಪನ ನಡೆಯುತ್ತದೆ. ನೋಟು ಮತ್ತು ನಾಣ್ಯ ಮೊದಲ ಹಂತ, ನಂತರ ಆಭರಣಗಳನ್ನು ಸಂಗ್ರಹಿಸಲಾಗುತ್ತದೆ ಎಣಿಕೆ ಕಾರ್ಯದಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.

‘ಎಣಿಕೆ ಸಂದರ್ಭ ಬೊಟ್ಟು ತಾಳಿ 9 ಮತ್ತು 8 ಬೆಳ್ಳಿ ಪದಾರ್ಥ ಕಂಡು ಬಂದಿದ್ದು, ಈ ಬಾರಿ ವಿದೇಶಿ ನೋಟುಗಳು ಇರುವುದಿಲ್ಲ’ ಎಂದು ಇಒ ವೈ.ಎನ್.ಮೋಹನ್ ಕುಮಾರ್ ಹೇಳಿದರು.

ತಹಶೀಲ್ದಾರ್ ಆರ್.ಜಯಪ್ರಕಾಶ್, ಉಪ ತಹಶೀಲ್ದಾರ್ ಶಿವರಾಜು, ಶಿರಸ್ತೇದಾರ್ ಶಾಂತಿ, ಮೋಹನ್ ಕುಮಾರ್, ದೇವಾಲಯದ ಪಾರುಪತ್ತೆಗಾರ ರಾಜು, ಶೇಷಾದ್ರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಪೊಲೀಸ್ ಮತ್ತು ಮುಜರಾಯಿ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT