ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ಹಂದಿ ನುಗ್ಗಿ ಮೆಕ್ಕೆಜೋಳ ನಾಶ

Published 18 ಮೇ 2024, 14:42 IST
Last Updated 18 ಮೇ 2024, 14:42 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಆಮೆಕೆರೆ ರಸ್ತೆ ಸುತ್ತಮುತ್ತಲ ಕೃಷಿ ಭೂಮಿಗಳಿಗೆ ಪ್ರತಿದಿನ ವನ್ಯ ಜೀವಿಗಳು ಲಗ್ಗೆ ಇಡುತ್ತಿದ್ದು, ಕೃಷಿಕರಿಗೆ ಈ ಭಾಗದಲ್ಲಿ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಶುಕ್ರವಾರ ತಡರಾತ್ರಿ ಮುಳ್ಳುಹಂದಿ, ಕಾಡುಹಂದಿ ಮತ್ತಿತರ ಪ್ರಾಣಿಗಳು ಮೆಕ್ಕೆಜೋಳದ ತಾಕಿಗೆ ನುಗ್ಗಿ ಬೆಳೆ ನಾಶ ಮಾಡಿವೆ. ಇದರಿಂದ ಲಕ್ಷಾಂತರ ಹಣ ನಷ್ಟಮಾಡಿದೆ ಎಂದು ರೈತರು ದೂರುತ್ತಾರೆ.

‘ಸಾವಿರಾರು ರೂಪಾಯಿ ಸಾಲ ಮಾಡಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದೆ. ಗೊಬ್ಬರ, ನೀರು ಹರಿಸಿ ರಾತ್ರಿ ಫಸಲು ಕಾಯುತ್ತಿದ್ದೆ. ಉತ್ತಮ ಇಳುವರಿ ಕೈ ಸೇರುವ ನಿರೀಕ್ಷೆ ಇತ್ತು. ಹಸಿ ಮೇವು ಪಡೆಯಲು ಮುಂಗಡ ನೀಡಿದ್ದರು. ಈ ಹಂತದಲ್ಲಿ ಐವತ್ತಕ್ಕೂ ಹೆಚ್ಚಿನ ಕೋರೆ ಹಂದಿ ಮತ್ತಿತರ ಪ್ರಾಣಿಗಳು ಬೆಳೆಯೊಳಗೆ ನುಗ್ಗಿ ಹಾಳು ಮಾಡಿದ್ದು, ಆರ್ಥಿಕ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಫಸಲು ನಷ್ಟ ಭರಿಸಿಕೊಡಬೇಕು’ ಎಂದು ಬೆಳೆಗಾರ ಪ್ರದೀಪ್ ನಾಯಕ್ ಅಳಲು ತೋಡಿಕೊಂಡರು.

‘ಕಾಡಂಚಿನ ಪ್ರದೇಶದಲ್ಲಿ ಗಸ್ತು ತಿರುಗುವುದು ನಿಂತಿದೆ. ರೈತರೆ ಅಟ್ಟಣೆ ಕಟ್ಟಿಕೊಂಡು ಬೆಳೆ ಕಾಯಬೇಕಿದೆ. ಅರಣ್ಯ ಇಲಾಖೆ ಬೆಳೆಗಾರರಿಗೆ ಪಟಾಕಿ ವಿತರಿಸುತ್ತಿಲ್ಲ. ಸೋಲಾರ್ ಬೇಲಿಯೂ ಪರಿಣಾಮಕಾರಿ ಆಗುತ್ತಿಲ್ಲ. ಹಾಗಾಗಿ, ಸೋಲಾರ್ ತಂತಿ ಪರದೆ ಬೇಲಿ ಬದಲಾಗಿ, ಚೈನ್ ಲಿಂಕ್ ತಂತಿ ಪರದೆ ಬೇಲಿ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಮಲಾರಪಾಳ್ಯ ಗ್ರಾಮದ ಕೃಷಿಕ ರಂಗಸ್ವಾಮಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT