ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರ ಬೆಟ್ಟ: 3 ದಿನದಲ್ಲಿ ₹1.29 ಕೋಟಿ ಆದಾಯ

ಮಹದೇಶ್ವರ ಬೆಟ್ಟ: ವಾರಾಂತ್ಯ, ಕ್ರಿಸ್‌ಮಸ್‌ ರಜೆ, ಲಕ್ಷಾಂತರ ಭಕ್ತರ ಭೇಟಿ
ಜಿ.ಪ್ರದೀಪ್‌ಕುಮಾರ್‌
Published 27 ಡಿಸೆಂಬರ್ 2023, 7:48 IST
Last Updated 27 ಡಿಸೆಂಬರ್ 2023, 7:48 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ವಾರಾಂತ್ಯ, ಕ್ರಿಸ್‌ಮಸ್ ರಜೆಗಳ ಅವಧಿಯಲ್ಲಿ ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಮೂರು ದಿನಗಳಲ್ಲಿ ವಿವಿಧ ಉತ್ಸವಗಳಿಂದ ₹1.29 ಕೋಟಿ ಆದಾಯ ಬಂದಿದೆ. 

ಡಿ.23ರ ಶನಿವಾರ ₹17,11,509, ಭಾನುವಾರ ₹54,80,984 ಮತ್ತು ಕ್ರಿಸ್‌ಮಸ್‌ ದಿನ ₹57,34,215 ಆದಾಯ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಸೇವೆಗಳು, ಮಾಹಿತಿ ಕೇಂದ್ರ, ಲಾಡು ವಿತರಣೆ, ತೀರ್ಥ ಪ್ರಸಾದ, ಬ್ಯಾಗ್, ಪಾರ್ಕಿಂಗ್, ಮಿಶ್ರ ಪ್ರಸಾದ, ಅಕ್ಕಿ ಸೇವೆ, ಪುದುವಟ್ಟು ಸೇವೆ, ವಿಶೇಷ ಪ್ರವೇಶ ಶುಲ್ಕ, ಜನ ವಾಹನ ಕ್ಯಾಲೆಂಡರ್ ಹಾಗೂ ಇತರೆ ಸೇರಿ ವಿವಿಧ ವಿಭಾಗದಿಂದ ವಸೂಲಾದ ಮೊತ್ತಗಳು ಇದರಲ್ಲಿ ಸೇರಿವೆ. ಹುಂಡಿ ಕಾಣಿಕೆಯ ಹಣ ಇದರಲ್ಲಿ ಸೇರಿಲ್ಲ.  

ಲಾಡು ಮಾರಾಟದಿಂದ ಶನಿವಾರ  ₹3,90,875, ಭಾನುವಾರ  ₹9,71,425 ಮತ್ತು ಸೋಮವಾರ  ₹12,05,350 ಸಂಗ್ರಹವಾಗಿದೆ. ಮೂರು ದಿನಗಳ ಅವಧಿಯಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿದ್ದಾರೆ.

ಧನುರ್ಮಾಸ ವಿಶೇಷ ಪೂಜೆ: ಧನುರ್ಮಾಸದ ಅಂಗವಾಗಿ ಮಂಗಳವಾರ ಮುಂಜಾನೆ 4ಗಂಟೆ ತನಕ ಮೊದಲ ಪೂಜೆ ಹಾಗೂ ಬಳಿಕ ಎರಡನೇ ವಿಶೇಷ ಅಭಿಷೇಕ, ವಿವಿಧ ಸೇವೆಯ ಪೂಜಾ ಕಾರ್ಯಗಳ ದೇವಾಲಯದ ಗರ್ಭಗುಡಿಯ ಒಳ ಆವರಣದಲ್ಲಿ ಜರುಗಿತು.

ಧನುರ್ಮಾಸದ ಅಂಗವಾಗಿ ಅರ್ಚಕರು ವಿಶೇಷ ದಳದ ಬಸವವಾಹನ ಉತ್ಸವ ಪ್ರದಕ್ಷಿಣೆ ಮಾಡಿ, ಪಂಜಿನ ದೀವಾಟಿಗೆ ಸೇವೆ ಸಲ್ಲಿಸಿದರು. ಬಳಿಕ ಮಹದೇಶ್ವರಸ್ವಾಮಿಗೆ ವಿಶೇಷ ನೈವೇದ್ಯ ಅರ್ಪಿಸಿ ಮಂಗಳಾರತಿ ನೆರವೇರಿಸಿದರು. ಆ ಬಳಿಕ 

ಕಿಕ್ಕಿರಿದ ಭಕ್ತರು: ಧನುರ್ಮಾಸದ ಸಮಯದಲ್ಲಿ ಮಹದೇಶ್ವರಸ್ವಾಮಿಯ ದರ್ಶನ ಪಡೆದರೆ ಒಳ್ಳೆಯದಾಗಲಿದೆ ಎಂಬ ನಂಬಿಕೆ ಮಾದಪ್ಪನ ಭಕ್ತರದ್ದಾಗಿದೆ. 

ಜಿಲ್ಲೆ ಅಲ್ಲದೇ ಹೊರ ಜಿಲ್ಲೆಗಳು, ನೆರೆಯ ತಮಿಳುನಾಡಿನಿಂದ ಬಂದಿದ್ದ ಭಕ್ತರು ಅಂತರಗಂಗೆಯಲ್ಲಿ ಮಿಂದು ದೇವಾಲಯದ ಸುತ್ತ ಉರುಳು ಸೇವೆ ಮಾಡಿದರು. 

ಬೆಳ್ಳಿ ವಾಹನ ಸೇರಿದಂತೆ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಉತ್ಸವ, ಪಂಜು ಸೇವೆ ಕಾರ್ಯದಲ್ಲಿ ಪಾಲ್ಗೊಂಡರು. 

ವಾಸ್ತವ್ಯಕ್ಕೆ ಪರದಾಟ  ಸರ್ಕಾರದ ಶಕ್ತಿ ಯೋಜನೆಯ ಕಾರಣಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಬೆಟ್ಟದಲ್ಲಿ ವಸತಿ ಗೃಹಗಳ ಕೊರತೆ ಎದುರಾಯಿತು. ರಾತ್ರಿ ವಾಸ್ತವ್ಯಕ್ಕೆ ಭಕ್ತರು ಪರದಾಡುವಂತಾಯಿತು.  ಪ್ರಾಧಿಕಾರದ ವಸತಿ ಗೃಹಗಳು ಭರ್ತಿಯಾಗಿದ್ದರಿಂದ ಖಾಸಗಿ ವಸತಿ ಗೃಹಗಳತ್ತ ಭಕ್ತರು ಮುಖ ಮಾಡಿದರು. ಅವುಗಳೂ ಭರ್ತಿಯಾಗಿದ್ದರಿಂದ ಅಪಾರ ಸಂಖ್ಯೆಯ ಭಕ್ತರು ಅಲ್ಲಲ್ಲಿ ಬಿಡಾರಗಳಲ್ಲಿ ವಿಶ್ರಾಂತಿ ಪಡೆದರು.  ದೇವಾಲಯದ ಪ್ರಾಂಗಣ ಬಸ್ ನಿಲ್ಧಾಣ ರಾಜಗೋಪುರದ ಎಡ-ಬಲ ಬದಿಯಲ್ಲಿ ಆವರಣ ದಾಸೋಹ ಮಹದೇಶ್ವರ ಕಲ್ಯಾಣ ಮಂಟಪ ಬಳಿ ಸಾಲೂರು ಮಠ ಆವರಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಾವಿರಾರರು ಭಕ್ತರು ಕಳೆದ ಎರಡು ದಿನಗಳಿಂದ ರಾತ್ರಿವೇಳೆ ಬಿಡಾರ ಹೂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT