ಸೋಮವಾರ, ಜನವರಿ 18, 2021
25 °C

ಚಾಮರಾಜನಗರ: ಟಿಪ್ಪರ್‌ ಡಿಕ್ಕಿ– ಇಬ್ಬರು ಯುವಕರ ದಾರುಣ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸತ್ಯಮಂಗಲ ರಸ್ತೆಯ ಸಿದ್ಧಾರ್ಥ ಚಿತ್ರಮಂದಿರದ ಬಳಿ ಶನಿವಾರ ಹಿಂಬದಿಯಿಂದ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮಧ್ಯಾಹ್ನ 3.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ತಾಲ್ಲೂಕಿನ ಬ್ಯಾಡಮೂಡ್ಲು ಗ್ರಾಮದ ಮಣಿಕಂಠ (24) ಹಾಗೂ ಹೊಂಗನೂರು ಗ್ರಾಮದ ನಾಕಶೆಟ್ಟಿ ಎಂಬುವವರ ಮಗ ನಟರಾಜು (24) ಮೃತಪಟ್ಟವರು. 

ಮಣಿಕಂಠ ಹಾಗೂ ನಟರಾಜ ಅವರು ಸ್ನೇಹಿತರಾಗಿದ್ದು, ಪಲ್ಸರ್‌ ಬೈಕ್‌ನಲ್ಲಿ ಚಾಮರಾಜನಗರದಿಂದ ಸೋಮವಾರಪೇಟೆಯ ಕಡೆಗೆ ಹೋಗುತ್ತಿದ್ದರು. ಈ ವೇಳೆ ಟಿಪ್ಪರ್‌ ಒಂದು ಹಿಂಬದಿಯಿಂದ ಡಿಕ್ಕಿ ಹೊಡೆದು, ಯುವಕರ ಮೇಲೆ ಹರಿದಿದೆ. ಇಬ್ಬರ ಮುಖ ಕೂಡ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯುವಕರು ಬೈಕ್‌ನಲ್ಲಿ ಊಟದ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದರು. ಅಪಘಾತದ ಬಳಿಕ ಇಬ್ಬರ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಊಟ ಚೆಲ್ಲಾಪಿಲ್ಲಿಯಾಗಿತ್ತು. 

ಚಾಲಕ ಟಿಪ್ಪರ್‌ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.