ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲ್ಲೂರು: ನಡೆಯಲಿದೆಯೇ ಪಂಕ್ತಿಸೇವೆ?

ಜಿಲ್ಲಾಡಳಿತದ ನಿಗಾ, ಪ್ರಾಣಿ ಬಲಿಯಲ್ಲ, ಮಾಂಸಾಹಾರ ಸಹಭೋಜನವಷ್ಟೆ–ಭಕ್ತರ ಹೇಳಿಕೆ
Last Updated 12 ಜನವರಿ 2020, 19:45 IST
ಅಕ್ಷರ ಗಾತ್ರ

ಹನೂರು: ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ವೇಳಾಪಟ್ಟಿ ಪ್ರಕಾರ, ವಿವಾದಿತ ಪಂಕ್ತಿಸೇವೆ ಸೋಮವಾರ ನಡೆಯಲಿದೆ.

ಪ್ರಾಣಿ ಬಲಿ ತಡೆಯಲು ಕ್ರಮ ಕೈಗೊಳ್ಳಿ ಎಂಬ ಹೈಕೋರ್ಟ್‌ ತೀರ್ಪಿನ ಪಾಲನೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಆಚರಣೆಯ ಮೇಲೆ ನಿಗಾ ಇಟ್ಟಿದೆ. ಇತ್ತ ಭಕ್ತರು ತಲೆಮಾರುಗಳಿಂದ ಆಚರಿಸುತ್ತಾ ಬಂದಿರುವ ಸಂಪ್ರದಾಯವನ್ನು ಬಿಟ್ಟುಬಿಡಲು ನಿರಾಕರಿಸಿದ್ದು, ಪಂಕ್ತಿಸೇವೆಗೆ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳೂ ಅವರ ಬೆಂಬಲಕ್ಕೆ ನಿಂತಿದ್ದಾರೆ.

‘ಚಿಕ್ಕಲ್ಲೂರಿನಲ್ಲಿ ಬಲಿ ಪೀಠ ಇಲ್ಲ. ಮಂಟೇಸ್ವಾಮಿ, ಸಿದ್ದಪ್ಪಾಜಿ ಪರಂಪ‍ರೆಯಲ್ಲಿ ಬಲಿ ನೀಡುವ ಪದ್ಧತಿ ಇಲ್ಲ. ಮಾಂಸಾಹಾರ ಸಿದ್ಧಪಡಿಸಿ, ಸಹಭೋಜನ ಮಾಡಲಾಗುತ್ತದೆ’ ಎಂಬುದು ಭಕ್ತರ ವಾದ.

ಏನಿದು ಪಂಕ್ತಿಸೇವೆ?: ಮಂಟೇಸ್ವಾಮಿ ಪರಂಪರೆಯಲ್ಲಿ ನೀಲಗಾರದೀಕ್ಷೆಪಡೆದುಸಿದ್ಧರಾದವರುಒಂದೆಡೆ ಸೇರಿತಮಗೆತಾವೇಸಲ್ಲಿಸಿಕೊಳ್ಳುವಆಚರಣೆಯೇ ಪಂಕ್ತಿಸೇವೆ (ಸಿದ್ಧರ ಸೇವೆ).

ತಮ್ಮ ಇಷ್ಟಾರ್ಥ ದೈವಸಿದ್ದಪ್ಪಾಜಿಕೃಪೆಗಾಗಿಸೇವೆಸಲ್ಲಿಸುವುದೇ ಚಿಕ್ಕಲ್ಲೂರು ಜಾತ್ರೆಯ ಮೂಲ ಉದ್ದೇಶ. ಹರಕೆಹೊತ್ತವರು, ನೀಲಗಾರ ದೀಕ್ಷೆ ಪಡೆದವರು, ಪ್ರತಿವರ್ಷಅನ್ನದಾನಮಾಡುವಉದ್ದೇಶವುಳ್ಳವರು ತಮ್ಮಬಂಧುಬಳಗ,ನೆಂಟರುಸ್ನೇಹಿತರನ್ನು ಒಳಗೊಂಡುಜಾತಿ,ಧರ್ಮ, ಭೇದವಿಲ್ಲದೆಎಲ್ಲರನ್ನು ಆಹ್ವಾನಿಸಿಬಂದವರಿಗೆಲ್ಲಾಪಂಕ್ತಿಕೂರಿಸಿಊಟಹಾಕುತ್ತಾರೆ.ಸಸ್ಯಾಹಾರಿಗಳುಸಸ್ಯಹಾರದಅಡುಗೆಮಾಡುತ್ತಾರೆ.

ಮಾಂಸಹಾರಿಗಳುಕುರಿ,ಕೋಳಿಗಳನ್ನು ಕೊಯ್ದು ಸ್ಥಳದಲ್ಲೇ ಅಡುಗೆತಯಾರಿಸಿಪಂಕ್ತಿಸೇವೆಮಾಡುತ್ತಾರೆ.

ಕೋರ್ಟ್ ಮೆಟ್ಟಿಲೇರಿದ ಪ್ರಕರಣ: ಬೆಂಗಳೂರುಮೂಲದವಿಶ್ವಪ್ರಾಣಿಕಲ್ಯಾಣಮಂಡಳಿ ಸಂಘವು, ‘ಪಂಕ್ತಿಸೇವೆ ಹೆಸರಿನಲ್ಲಿಪ್ರಾಣಿಬಲಿ ನಡೆಯುತ್ತಿದ್ದು ಅದಕ್ಕೆ ನಿಷೇಧ ಹೇರಬೇಕು’ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಪ್ರಾಣಿಬಲಿಗೆ ಅವಕಾಶ ನೀಡದಂತೆ 2017ರಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಜಿಲ್ಲಾಡಳಿತ ಎರಡು ವರ್ಷಗಳಿಂದೀಚೆಗೆ ದೇವಸ್ಥಾನದ ಆವರಣದಲ್ಲಿ ಪ್ರಾಣಿಗಳನ್ನು ಕೊಲ್ಲಲು ಅವಕಾಶ ನೀಡುತ್ತಿಲ್ಲ. ಜಾತ್ರೆಗೆ ಹೋಗುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಿ ಭಕ್ತರು ಕೊಂಡು ಹೋಗುವ ಕುರಿ, ಕೋಳಿ ಹಾಗೂ ಅಡುಗೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಹಾಗಿದ್ದರೂ ಕೆಲವು ಭಕ್ತರು ಪೊಲೀಸರು, ಅಧಿಕಾರಿಗಳ ಕಣ್ಣುತಪ್ಪಿಸಿ ಪಂಕ್ತಿಸೇವೆ ನಡೆಸುತ್ತಲೇ ಇದ್ದಾರೆ.

ಪರಂಪರೆಹೋರಾಟಸಮಿತಿ ರಚನೆ:‘ಕುರಿ, ಕೋಳಿಕೊಯ್ದು ಮಾಂಸಹಾರದಅಡುಗೆಮಾಡಿತಮ್ಮಸಂತರಗದ್ದಿಗೆ, ಕಂಡಾಯಗಳಿಗೆಎಡೆಸರ್ಮಪಿಸುವುದು, ಬಳಿಕಎಲ್ಲರೂಜಾತಿ,ಮತ,ಧರ್ಮ ಭೇದಗಳಿಲ್ಲದೆಒಂದೇಪಂಕ್ತಿಯಲ್ಲಿಕುಳಿತುಊಟಮಾಡುವುದುನಮ್ಮಧಾರ್ಮಿಕಸಂಸ್ಕೃತಿಕಹಕ್ಕು. ಈಆಚರಣೆಗೆ ಅಡ್ಡಿಪಡಿಸಬಾರದು ಎಂದು ಹಲವುಸಂಘಸಂಸ್ಥೆಗಳುಪ್ರಗತಿಪರಸಾಹಿತಿಗಳು,ವಿಚಾರವಾದಿಗಳು,ರಾಜಕಾರಣಿಗಳುಸಂಘಟಿತರಾಗಿ ಮಂಟೇಸ್ವಾಮಿ ರಾಚಪ್ಪಾಜಿ,ಸಿದ್ದಪ್ಪಾಜಿ ಹೋರಾಟ ಸಮಿತಿಯನ್ನು ರಚಿಸಿಕೊಂಡು 2017 ಜ. 2ರಿಂದ ಪಾದಯಾತ್ರೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

‘ಪಂಕ್ತಿಸೇವೆಭಕ್ತರಧಾರ್ಮಿಕ-ಸಾಂಸ್ಕೃತಿಕಹಕ್ಕುಮಾತ್ರವಲ್ಲದೆಅವರಆಹಾರದಹಕ್ಕು. ಆದ್ದರಿಂದ ಪಂಕ್ತಿಸೇವೆಗೆ ಅವಕಾಶ ಕಲ್ಪಿಸಬೇಕು’ ಮಂಟೇಸ್ವಾಮಿಪ್ರತಿಷ್ಠಾನಮತ್ತುಹೋರಾಟಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್, 2017ರ ಜ.13 ರಂದು ಮಧ್ಯಂತರಆದೇಶನೀಡಿ1959, 1960ಕಾಯ್ದೆಗಳಿಗೆ ಒಳಪಟ್ಟುಪರಂಪರೆ ಪಾಲನೆಗೆ ಧಕ್ಕೆಯಾಗದಂತೆಪಂಕ್ತಿಸೇವೆಗೆಅವಕಾಶನಿಡಬೇಕು ಎಂದು ಆದೇಶಿಸಿತ್ತು. ಇದರಿಂದಾಗಿ2017ರಲ್ಲಿ ಪಂಕ್ತಿಸೇವೆಭಯ,ಆತಂಕದನಡುವೆಯೂ ಸ್ವಲ್ಪಮಟ್ಟಿಗೆಯಶಸ್ವಿಯಾಗಿನಡೆದಿತ್ತು.

‘ತಪ್ಪಾಗಿ ಅರ್ಥೈಸಲಾಗಿದೆ’
‘ದೇವಾಲಯಗಳಮುಂದೆಎಲ್ಲೂಬಲಿಪೀಠ ಇಲ್ಲ. ಗದ್ದಿಗೆ-ದೇವಾಲಯದಮುಂದೆಅಥವಾಆವರಣದೊಳಗೆ ಕಡಿಯುವಪದ್ಧತಿಯೂಇಲ್ಲ. ಒಕ್ಕಲಿನವರು, ಭಕ್ತರು, ಹರಕೆ ಹೊತ್ತವರು ಗದ್ದಿಗೆಯಿಂದಬಹುದೂರದಲ್ಲಿಬೀಡುಬಿಟ್ಟು ಬಿಡಾರಗಳಲ್ಲಿತಮ್ಮಸಿದ್ಧರಸೇವೆಗೆ ಸಹಪಂಕ್ತಿಭೋಜನಕ್ಕೆ,ಎಡೆಅರ್ಪಿಸಲುಕುರಿ, ಕೋಳಿಗಳನ್ನುಅಲ್ಲೆ ಕೊಯ್ದು ಶುಚಿಗೊಳಿಸುತ್ತಾರೆ. ಅಲ್ಲಿಯೇ ಅಡುಗೆಮಾಡಿಊಟಮಾಡುತ್ತಾರೆ. ಇದನ್ನೇ ಪ್ರಾಣಿಬಲಿ ಎಂದು ತಪ್ಪಾಗಿ ಅರ್ಥೈಸಲಾಗಿದೆ’ ಎಂಬುದು ಭಕ್ತರ ಅಳಲು.

**
ನ್ಯಾಯಾಲಯ ಪ್ರಾಣಿ ಹತ್ಯೆ ಮಾಡದಂತೆ ಆದೇಶಿಸಿದೆ. ಇದರ ಬೆನ್ನಲ್ಲೇ 600 ವರ್ಷಗಳ ಪರಂಪರೆಗೆ ಪಾಲನೆಗೆ ಧಕ್ಕೆಯಾಗದಂತೆ ಪಂಕ್ತಿಸೇವೆಗೆ ಅವಕಾಶ ನೀಡಿದೆ
-ಎನ್. ಮಹೇಶ್, ಕೊಳ್ಳೇಗಾಲ ಶಾಸಕ

**
ನಾವು ಒಕ್ಕಲಿನವರು ಪ್ರತಿ ವರ್ಷ ನೆಂಟರಿಷ್ಟರನ್ನು ಕರೆದು ಎಲ್ಲರಿಗೂ ಊಟ ಹಾಕುತ್ತಿದ್ದೆವು. ಆದರೆ ಮೂರು ವರ್ಷಗಳಿಂದ ಅಧಿಕಾರಿಗಳು ಇದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ
-ಸಿದ್ದಪ್ಪಾಜಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT