ಹನೂರು: ಇಲ್ಲಿನ ಮಲೆಮಹದೇಶ್ವರ ವನ್ಯಧಾಮದಲ್ಲಿ ಜಿಂಕೆಗಳನ್ನು ಬೇಟೆಯಾಡಿದ್ದ ಪಳನಿಮೇಡು ಗ್ರಾಮದ ಹರೀಶ ಎಂಬಾತನನ್ನು ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದು, ಮೂರು ಜಿಂಕೆಗಳ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.
ರಾಮಾಪುರ ವನ್ಯಜೀವಿ ವಲಯದ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆ ಬಳಿ ಮೂರು ಜಿಂಕೆಗಳನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿ ದಾಳಿ ಮಾಡಿದಾರೆ.
ಪ್ರಕರಣ ಸಂಬಂಧ ಅಜ್ಜೀಪುರ ಗ್ರಾಮದ ಗೋವಿಂದ ಹಾಗೂ ಜಿ.ಆರ್. ನಗರ ಗ್ರಾಮದ ಪ್ರಭು ಎಂಬುವವರು ನಾಡಬಂದೂಕಿನೊಂದಿಗೆ ಪರಾರಿಯಾಗಿದ್ದು, ಹರೀಶ್ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಬಂಧಿಸಿ ಮೂರು ಜಿಂಕೆ ಮೃತದೇಹಗಳನ್ನು ವಶಪಡಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ.