ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ಬೆಳೆಸಿಕೊಂಡು ಅಭಿವೃದ್ಧಿ ಹೊಂದಿ

ಮೇಲುಕಾಮನಹಳ್ಳಿ: ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಶಾಸಕರ ಸಲಹೆ
Last Updated 28 ಜನವರಿ 2023, 6:19 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಲಂಟಾನಾ ಗಿಡಗಳಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡುವ ಕೌಶಲಗಳನ್ನು ಬಳಸಿಕೊಂಡು ಬುಡಕಟ್ಟು ಜನರು ಅಭಿವೃದ್ಧಿ ಹೊಂದಬೇಕು’ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು.

ತಾಲ್ಲೂಕಿನ ಮೇಲುಕಾಮನಹಳ್ಳಿ ಸಫಾರಿ ಕೌಂಟರ್ ಬಳಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಕೌಶಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಡಂಚಿನಲ್ಲಿ ವಾಸಿಸುವ ಜನರು ಅರಣ್ಯದಲ್ಲಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು‘ ಎಂದು ಹೇಳಿದರು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಮಾತನಾಡಿ, ‘ಮೊದಲ 15 ದಿನದಲ್ಲಿ ಉತ್ತಮ ಲಾಂಟಾನ ಕಡ್ಡಿಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಬೇಯಿಸಿ ಹದ ಮಾಡಿದ ಸ್ವಚ್ಛಗೊಳಿಸಿ, ಅಳತೆಗೆ ತಕ್ಕಂತೆ ತುಂಡರಿಸಿ ಅವುಗಳನ್ನು ಪಿಠೋಪಕರಣ ಹಾಗೂ ಇತರೆ ಕರಕುಶಲ ವಸ್ತುಗಳ ರೂಪಕ್ಕೆ ಹೇಗೆ ತರುವುದು ಎಂಬುದರ ಬಗ್ಗೆ ಪೂರ್ಣ ತರಬೇತಿ ನೀಡಲಾಗುತ್ತದೆ. ಈ ತರಬೇತಿಯು ಕಚ್ಚಾ ವಸ್ತುಗಳ ಸಂಗ್ರಹಣೆಯಿಂದ ಹಿಡಿದು ಅವುಗಳು ಮಾರುಕಟ್ಟೆ ತಲುಪಿ ಗ್ರಾಹಕರ ಕೈ ಸೇರುವವರೆಗಿನ ಎಲ್ಲಾ ತರಬೇತಿಯನ್ನು ಒಳಗೊಂಡಿರುತ್ತದೆ‘ ಎಂದರು.

ಮಾರುಕಟ್ಟೆ ಅನೂಕೂಲಕ್ಕಾಗಿ ಸಫಾರಿ ಕೇಂದ್ರದ ಬಳಿ ಒಂದು ಹಾಗೂ ಮದ್ದೂರು ತನಿಖಾ ಠಾಣೆಯ ಬಳಿ ಒಂದು ಅಂಗಡಿಗಳನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ತೆರೆದು ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಆರ್ಥಿಕ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯವನ್ನು ಸಮಾಜಮುಖಿಯಾಗಿಸುವ ಜೊತೆಗೆ ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಹಲವಾರು ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಜಿ.ಎಸ್.ಬೆಟ್ಟ ವಲಯ ಭಾಗದ 20 ಜನ ಹಾಗೂ ಮದ್ದೂರು ವಲಯ ವ್ಯಾಪ್ತಿಯ 20 ಜನ, ಒಟ್ಟು 40 ಬುಡಕಟ್ಟು ಜನಾಂಗದವರಿಗೆ 3 ಹಂತದಲ್ಲಿ ಪ್ರತಿ 15 ದಿನಗಳಿಗೆ ಒಂದರಂತೆ ಒಟ್ಟು 45 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಂಡೀಪುರ ಅಭಯಾರಣ್ಯದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರವಿಂದ್ರ, ಕೆ.ಪರಮೇಶ್ ಸೇರಿದಂತೆ ವಲಯ ಅರಣ್ಯಾಧಿಕಾರಿಗಳು, ಬುಡಕಟ್ಟು ಜನಾಂಗದವರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT