ಶನಿವಾರ, ಅಕ್ಟೋಬರ್ 31, 2020
18 °C

ಕಾಲುಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ, 45 ದಿನಗಳ ಕಾಲ ನಡೆಯಲಿರುವ ಕಾಲುಬಾಯಿ ಜ್ವರಕ್ಕೆ ಲಸಿಕಾ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು. 

ತಾಲ್ಲೂಕಿನ ಹರದನಹಳ್ಳಿ ಬಂಡಿಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹಸುವಿಗೆ ಚುಚ್ಚುಮದ್ದು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.  

ನಂತರ ಮಾತನಾಡಿದ ಅವರು, ‘ಕಾಲುಬಾಯಿ ಜ್ವರ ಹೊಸ ಕಾಯಿಲೆ ಏನಲ್ಲ. ಚಳಿಗಾಲದಲ್ಲಿ ಬರುವ ಈ ಕಾಯಿಲೆ, ಮೊದಲು ಆಡು–ಕುರಿಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. 2011ರಲ್ಲಿ ಮೊದಲ ಬಾರಿಗೆ ಹಸುಗಳಲ್ಲಿ ಕಾಣಿಸಿಕೊಂಡಿತು. ಸಾವಿರಾರು ಹಸುಗಳು ಸತ್ತವು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ಜಾನುವಾರಿಗೆ ₹14 ಸಾವಿರದಂತೆ ಪರಿಹಾರ ಘೋಷಿಸಿತ್ತು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲು ಆರಂಭಿಸಲಾಯಿತು’ ಎಂದರು. 

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸದಾಶಿವ ಮೂರ್ತಿ, ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಹೆಚ್.ಎಂ.ಮಹದೇವಶೆಟ್ಟಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ, ಸಹಾಯಕ ನಿರ್ದೇಶಕ ಡಾ.ಸುಗಂದ್ ರಾಜ್, ಡಾ.ಶಿವಣ್ಣ, ಡಾ.ನಟರಾಜ, ಡಾ.ಮೂರ್ತಿ, ಮನೋಹರ್, ಚೇತನ್ ರಾಜ್, ಚಾಮುಲ್ ಅಧಿಕಾರಿಗಳಾದ ಡಾ.ಮುರುಗೇಶ್, ಪ್ರಭುಸ್ವಾಮಿ, ಶ್ಯಾಮಸುಂದರ್, ದಯಾನಂದ್, ಟಿವಿಎಸ್ ವ್ಯವಸ್ಥಾಪಕರಾದ ವಿಶ್ವನಾಥ್, ಹಾಲು ಉತ್ಪಾದಕರ ಸಂಘಗಳ ಅದ್ಯಕ್ಷೆ ಜಯಲಕ್ಷ್ಮಿ, ರಂಗಸ್ವಾಮಿ, ಮುಖ್ಯ ಕಾರ್ಯನಿರ್ವಾಹಕರಾದ ಆರ್.ಕಾವೇರಿ ಶಿವಕುಮಾರ್, ಪಿಎಸಿಸಿ ಅದ್ಯಕ್ಷ ಬಂಗಾರಶೆಟ್ಟಿ, ಮುಖಂಡರಾದ ಜಯಸ್ವಾಮಿ ಸೇರಿದಂತೆ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.