ಯಳಂದೂರು: ಪಟ್ಟಣ ಠಾಣಾ ವ್ಯಾಪ್ತಿಯ ಸುತ್ತೂರು ಗ್ರಾಮದ ರಾಕಸಮ್ಮ ದೇವಾಲಯದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ 9 ಜನರ ಮೇಲೆ ಪ್ರಕರಣ ದಾಖಲಾಗಿದೆ. ಇವರು ಪಣಕ್ಕೆ ಇಟ್ಟಿದ್ದ ₹18,700ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಹನುಮಂತ ಉಪ್ಪಾರ್ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ, ಕ್ರಮ ಕೈಗೊಂಡಿದ್ದಾರೆ.