ಭಾನುವಾರ, ನವೆಂಬರ್ 1, 2020
19 °C

ಚಾಮರಾಜನಗರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಸಂಜೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಚೆನ್ನಾಗಿ ಮಳೆ ಸುರಿದಿದೆ. ರಾತ್ರಿ ಏಳು ಗಂಟೆಯ ನಂತರ ಮಹದೇಶ್ವರ ಬೆಟ್ಟ, ಹನೂರು, ಗುಂಡ್ಲುಪೇಟೆ, ಯಳಂದೂರು ಭಾಗದಲ್ಲಿ ವರ್ಷಧಾರೆಯಾಗಿದೆ.

ಜಿಲ್ಲೆಯಾದ್ಯಂತ ಶುಕ್ರವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಚಾಮರಾಜನಗರದಲ್ಲಿ ಮಧ್ಯಾಹ್ನ 4 ಗಂಟೆಯ ನಂತರ ಆಗಸದಲ್ಲಿ ದಟ್ಟ ಮೋಡಗಳು ಕಂಡು ಬಂದವು. ಐದು ಗಂಟೆಯಿಂದ ಮಳೆ ಆರಂಭವಾಯಿತು. 6.30ರವರೆಗೂ ಬಿರುಸಿನ ಮಳೆಯಾಯಿತು.

ನಗರ ಮಾತ್ರವಲ್ಲದೇ ತಾಲ್ಲೂಕಿನ ವಿವಿಧ ಕಡೆಗಳಲ್ಲೂ ಧಾರಾಕಾರ ಮಳೆ ಸುರಿದಿದೆ. ಮಲ್ಲಯ್ಯನಪುರದಲ್ಲಿ 9.3 ಸೆಂ.ಮೀ, ಹರವೆ ಹೋಬಳಿಯಲ್ಲಿ 7.1 ಸೆಂ.ಮೀ, ಚಾಮರಾಜನಗರ ಕಸಬಾ ಹೋಬಳಿಯಲ್ಲಿ 6.9 ಸೆಂ.ಮೀ ಮಳೆಯಾಗಿದೆ.  

ರಸ್ತೆಯಲ್ಲಿ ಹರಿದ ನೀರು: ಭಾರಿ ಮಳೆಯಿಂದಾಗಿ ನಗರದ ಪ್ರಮುಖ, ಬಡಾವಣೆಗಳ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯಿತು. ಅಲ್ಲಲ್ಲಿ ಚರಂಡಿ ಕಟ್ಟಿಕೊಂಡಿದ್ದರಿಂದ ಕೊಳಚೆ ನೀರು ಕೂಡ ರಸ್ತೆಯಲ್ಲಿ ಹರಿಯಿತು. 

ಭುವನೇಶ್ವರಿ ವೃತ್ತದ ಬಳಿಯ ತ್ಯಾಗರಾಜ ರಸ್ತೆಯಲ್ಲಿ ನೀರು ಚರಂಡಿಗೆ ಸೇರದೆ ಸವಾರರು ಸಂಕಟ ಅನುಭವಿಸಿದರು. ಜೋಡಿ ರಸ್ತೆಯಲ್ಲಿ ಸೆಸ್ಕ್‌ ಕಚೇರಿ ಬಳಿಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಯಿತು. ತಗ್ಗು ಪ‍್ರದೇಶಗಳಿಗೆ ನೀರು ನುಗ್ಗಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.