ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರೆದ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಪ್ರತಿಭಟನೆ ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ ಭಾಗಿ
Last Updated 18 ಆಗಸ್ಟ್ 2020, 13:15 IST
ಅಕ್ಷರ ಗಾತ್ರ

ಚಾಮರಾಜನಗರ: ಸೇವೆ ಕಾಯಂಗೊಳಿಸುವುದು, ಲಾಕ್‌ಡೌನ್‌ ಅವಧಿಯ ಗೌರವ ಧನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ 7ನೇ ವಾರವೂ ಮುಂದುವರೆಯಿತು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಭಾಗಿಯಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅತಿಥಿ ಉಪನ್ಯಾಸಕರ ನ್ಯಾಯಯುತವಾದ ಬೇಡಿಕೆಗಳನ್ನು ಅಧಿವೇಶನ ಪ್ರಾರಂಭವಾಗುವುದರೊಳಗೆ ಸರ್ಕಾರ ಈಡೇರಿಸದಿದ್ದರೆ ಸದನದಲ್ಲಿ ಶಾಸಕರೆಲ್ಲ ಒಗ್ಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

"ಕಡಿಮೆ ವೇತನದಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಕೆಲಸ ಮಾಡಿವವರನ್ನೇ ಕಾಯಂ ಮಾಡದೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳಲು ಹೊರಟಿರುವುದು ಸರಿಯಲ್ಲ. ಲಾಕ್ ಡೌನ್ ಅವಧಿಗೆ ವೇತನ ಕೋಡಬೇಕು. ಹರಿಯಾಣ ಅಥವಾ ಪಶ್ಚಿಮ ಬಂಗಾಳ ಮಾದರಿಯಲ್ಲಿ 60 ವರ್ಷಗಳವರೆಗೆ ಸೇವಾ ಭದ್ರತೆ, ಇತರೆ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಈ ವಿಷಯದ ಬಗ್ಗೆ ಸದನದಲ್ಲೂ ಹೋರಾಡುತ್ತೇನೆ’ ಎಂದು ಶ್ರೀಕಂಠೇಗೌಡ ಅವರು ಹೇಳಿದರು.

ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಶೀರಸ್ತೇದಾರರಾದ ಅನೂಷ್ ಅವರಿಗೆ ಸಲ್ಲಿಸಲಾಯಿತು.

ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಗುರುರಾಜು ಯರಗನಹಳ್ಳಿ, ಸಹ ಕಾರ್ಯದರ್ಶಿ ಎಂ.ಎನ್.ದೇವರಾಜು, ಖಜಾಂಚಿ ಜೆ.ಉಮಾ, ಜಿಲ್ಲಾ ಸಂಯೋಜಕರಾದ ರಮೇಶ್, ಚಿಕ್ಕಸಿದ್ದಯ್ಯ, ಮಹೇಶ ಕುಮಾರ್, ರಮೇಶ, ಅರವಿಂದ್, ದೊಡ್ಡಮ್ಮ, ಕೊಳ್ಳೆಗಾಲ ಕಾಲೇಜಿನ ಡಿ.ಕುಮಾರ್‌, ಮಹದೇವಸ್ವಾಮಿ, ಹನೂರು ಕಾಲೇಜಿನ ಎನ್.ಜಯಪ್ರದ, ಎಸ್.ಮಹಾಲಕ್ಷ್ಮಿ, ಎಂ.ವತ್ಸಲ, ಮಲೈ ಮಹದೇವಸ್ವಾಮಿ, ಚಾಮರಾಜನಗರ ಆರ್.ಭಾಗ್ಯ, ಪಿ.ಶಾರದ, ಆರ್.ಪದ್ಮವತಿ,ಮಹಿಳಾ ಕಾಲೇಜಿನ ಎಸ್.ದಿವ್ಯಶ್ರೀ, ಎನ್.ಕಾವ್ಯ, ಎನ್.ಸುನೀತ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT